ಮುಂಬೈ:ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಸಿಎಸ್ಕೆ ಗೆಲುವಿಗೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೊಡುಗೆ ಪ್ರಮುಖವಾಗಿತ್ತು.
ಈ ಪಂದ್ಯದಲ್ಲಿ ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ಅವರು ಕಮಾಲ್ ಮಾಡಿದ್ದರು. ಬೌಲಿಂಗ್‌ನಲ್ಲಿ ಆರ್ಆರ್ ತಂಡದ ಪ್ರಮುಖ 2 ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಫೀಲ್ಡಿಂಗ್‌ನಲ್ಲೂ 4 ಕ್ಯಾಚ್ ಪಡೆದು ತಾನೊಬ್ಬ ಸಂಪೂರ್ಣ ಆಲ್‌ರೌಂಡರ್ ಅನ್ನೋದನ್ನು ತೋರಿಸಿದರು.