ನವದೆಹಲಿ: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಅರಾಜಕತೆ ಮುಂದೆ ನಡೆಯಲಿರುವ 14 ನೇ ಆವೃತ್ತಿಯ ಉಳಿದ ಭಾಗವಾದ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಏನಾದರೂ ಪರಿಣಾಮ ಬೀರಬಹುದಾ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಲಿರುವ ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹಾಗೂ ಆಲ್‌ರೌಂಡರ್ ಮೊಹಮ್ಮದ್ ನಬಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ ಈ ಬಗ್ಗೆ ಖಚಿತಪಡಿಸಿದೆ.
ಅಫ್ಘಾನಿಸ್ತಾನದ ಈ ಇಬ್ಬರು ಆಟಗಾರರು ಲೀಗ್‌ನ 14 ನೇ ಆವೃತ್ತಿಯ ಉಳಿದ ಭಾಗದಲ್ಲಿ ತಮ್ಮ ಬಲವನ್ನು ತೋರ್ಪಡಿಸಲಿದ್ದಾರೆ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಾವು ಚರ್ಚೆ ಮಾಡುವುದಿಲ್ಲ. ಅದು ಅನಾವಶ್ಯಕ. ಆದರೆ, ಅಫ್ಘಾನಿಸ್ತಾನದ ಆ ಇಬ್ಬರು ಸ್ಟಾರ್ ಆಟಗಾರರು ಲಭ್ಯವಿರುತ್ತಾರೆ. ಆಗಸ್ಟ್ 31ರ ತಿಂಗಳ ಕೊನೆಯಲ್ಲಿ ಹೊರಡುತ್ತಿದ್ದೇವೆ ಎಂದು ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕೆ.ಷಣ್ಮುಗಂ ಖಚಿತಪಡಿಸಿದ್ದಾರೆ.