ನವದೆಹಲಿ:ಕಳೆದ ಐಪಿಎಲ್ ಮತ್ತು ಪ್ರಸಕ್ತ ಸಾಲಿನ ಆವೃತ್ತಿಯ ಆರಂಭದ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ವಿಫಲವಾಗುತ್ತಿದೆ. ಸ್ಟಾರ್ ಬೌಲರ್ಗಳ ಕೊರತೆಯೂ ಎದ್ದು ಕಾಣುತ್ತಿದೆ. 2022ರ ಮೆಗಾ ಹರಾಜಿನ ನಂತರ ಮುಂಬೈ ವೀಕ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ಟ್ರಂಟ್ ಬೌಲ್ಟ್ ಬೇರೆ ಫ್ರಾಂಚೈಸಿ ಸೇರಿದರೆ, ಬೂಮ್ರಾ ಈ ಆವೃತ್ತಿಯಿಂದ ಹೊರಗಿದ್ದಾರೆ. ರೋಹಿತ್ ಪಾಳಯದ ಫಿನಿಶರ್ ಆಗಿದ್ದ ಕಿರನ್ ಪೊಲಾರ್ಡ್ ನಿವೃತ್ತಿ ಘೋಷಿಸಿದ್ದಾರೆ. ತಂಡದಲ್ಲಿ ಬಾಕಿ ಉಳಿದಿರುವ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಬೃಹತ್ ಜೊತೆಯಾಟ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.
ತಂಡ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಆರ್ಸಿಬಿ ವಿರುದ್ಧ ತಿಲಕ್ ವರ್ಮಾ ಬ್ಯಾಟಿಂಗ್ ಬಲದಿಂದ 172 ರನ್ ಗಳಿಸಿದರೂ, ಆರ್ಸಿಬಿ ಎರಡೇ ವಿಕೆಟ್ ಕಳೆದುಕೊಂಡು 17 ನೇ ಓವರ್ನಲ್ಲಿ ಪಂದ್ಯ ಗೆದ್ದುಕೊಂಡಿತು. ಚೆನ್ನೈ ವಿರುದ್ಧ 8 ವಿಕೆಟ್ ಕಳೆದುಕೊಂಡು 157 ರನ್ ಮಾತ್ರ ಗಳಿಸಿತ್ತು. ಪಂದ್ಯವನ್ನು ಚೆನ್ನೈ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತ್ತು.
ಇದನ್ನೂ ಓದಿ:ಟಿ20 ಕ್ರಿಕೆಟ್ನಲ್ಲಿ 300 ಸಿಕ್ಸರ್! ರೋಚಕ ಪಂದ್ಯ ಸೋತು ಮನಗೆದ್ದ RCB ನಾಯಕ ಡು ಪ್ಲೆಸಿಸ್
ಈ ಕುರಿತು ಮಾಧ್ಯಮವೊಂದಕ್ಕೆ ಮಾತನಾಡಿದ ಸುನಿಲ್ ಗವಾಸ್ಕರ್, "ಕಳೆದ ಸೀಸನ್ನಿಂದ ಇಲ್ಲಿಯವರೆಗಿನ ದೊಡ್ಡ ಜೊತೆಯಾಟ ಬಾರದಿರುವುದು ಮುಂಬೈ ತಂಡದ ದೊಡ್ಡ ಸಮಸ್ಯೆ. ದೊಡ್ಡ ಜೊತೆಯಾಟ ಬರದೇ ಇದ್ದಲ್ಲಿ ಸ್ಕೋರ್ ಬೋರ್ಡ್ನಲ್ಲಿ ಬೃಹತ್ ಮೊತ್ತ ಕಲೆಹಾಕುವುದು ಕಷ್ಟ. ಜೊತೆಯಾಟದ ಕೊರತೆಯನ್ನು ಕಳೆದ ಕೆಲ ಪಂದ್ಯಗಳಿಂದ ಮುಂಬೈ ಇಂಡಿಯನ್ಸ್ ಎದುರಿಸುತ್ತಾ ಬಂದಿದೆ. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಆರಂಭಿಕ ಜೊತೆಯಾಟ ಒದಗಿಸುವ ಅಗತ್ಯ ಇದೆ" ಎಂದು ಹೇಳಿದ್ದಾರೆ.
ಇಂದು ಫಿರೋಜ್ಶಾ ಕೋಟ್ಲಾ ಮೈದಾನದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಆಡುತ್ತಿವೆ. ಡಿಸಿ ನಾಯಕ ರಿಷಬ್ ಪಂತ್ ಇಲ್ಲದೇ ಕೊರತೆ ಅನುಭವಿಸುತ್ತಿದೆ. ಇದಲ್ಲದೇ ಈ ಆವೃತ್ತಿಯಲ್ಲಿ ಎರಡೂ ತಂಡಗಳು ಒಂದು ಗೆಲುವನ್ನು ಕಂಡಿಲ್ಲ. ಇಂದಿನ ಗೆಲುವು ತಂಡಗಳಿಗೆ ಚೊಚ್ಚಲ ಗೆಲುವಾಗಲಿದೆ. ನಾಲ್ಕನೇ ಸ್ಥಾನಕ್ಕೆ ಪ್ರವೇಶಿಸಲು ಎರಡೂ ತಂಡಕ್ಕೆ ಮುಂದಿನ ಪಂದ್ಯಗಳ ಗೆಲುವುಗಳು ಪ್ರಮುಖ ನಿರ್ಣಾಯಕಗಳಾಗಲಿವೆ.
ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಟಾಮ್ ಮೂಡಿ, "ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಪವರ್ ಪ್ಲೇ ಸಂದರ್ಭದಲ್ಲಿ ಉತ್ತಮ ರನ್ ಕಲೆಹಾಕುವ ಅಗತ್ಯ ಇದೆ" ಎಂದು ಹೇಳಿದ್ದಾರೆ. ಮೂರು ಪಂದ್ಯದಲ್ಲಿ ವಾರ್ನರ್ ಉತ್ತಮ ರನ್ ಗಳಿಸುತ್ತಿದ್ದಾರೆ. ಆದರೆ ಏಕಾಂಗಿಯಾಗಿ ಆಡುತ್ತಿರುವುದರಿಂದ ಭರ್ಜರಿ ಸಿಕ್ಸರ್ಗಳು ಅವರ ಬ್ಯಾಟ್ನಿಂದ ಬರುತ್ತಿಲ್ಲ.
ಇದನ್ನೂ ಓದಿ:IPL 2023: ಮೊದಲ ಗೆಲುವಿಗಾಗಿ ಡೆಲ್ಲಿ - ಮುಂಬೈ ಫೈಟ್