ಲಕ್ನೋ (ಉತ್ತರ ಪ್ರದೇಶ): ನಿನ್ನೆ ಇಲ್ಲಿನ ಏಕಾನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾದವು. ಸನ್ ರೈಸರ್ಸ್ ಹೈದರಾಬ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ ಅಲ್ಪ ಮೊತ್ತಕ್ಕೆ ಕುಸಿಯಿತು. ಇದರಿಂದ ತವರು ನೆಲದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸುಲಭ ಗೆಲುವು ಸಾಧಿಸಿದರು.
ಆದರೆ ಟ್ವಿಟರ್ನಲ್ಲಿ ಕಾವ್ಯಾ ಮಾರನ್ ಅವರ ಸಂಭ್ರಮಾಚರಣೆ ವೈರಲ್ ಆಗಿದೆ. ಈ ಹಿಂದೆಯೂ ಕಾವ್ಯ ವೈರಲ್ ಆಗಿದ್ದರು. ಬಿಡ್ಡಿಂಗ್ ವೇಳೆ ಅವರನ್ನು ಕ್ಯಾಮರಾದಲ್ಲಿ ಹೆಚ್ಚು ಕವರ್ ಮಾಡಲಾಗಿತ್ತು. ಹೀಗೆ ಅವರು ಆಗಲು ವೈರಲ್ ಆಗಿದ್ದು, ಆದರೆ ಈ ಕಾವ್ಯ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ.
ನಿನ್ನೆ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಅವರ ವಿಕೆಟ್ ಬಿದ್ದಾಗ, ಕಾವ್ಯಾ ಸ್ಟ್ಯಾಂಡ್‌ನಲ್ಲಿ ಸಂತೋಷದಿಂದ ಜಿಗಿದು ಸಂಭ್ರಮಿಸಿದ್ದರು. ನಿನ್ನೆಯ ಪಂದ್ಯದ ಅದ್ಭುತ ಕ್ಷಣಗಳಲ್ಲಿ ಒಂದಾಗಿದೆ. ಕೈಲ್ ಮೇಯರ್ಸ್ ಕಳೆದೆರಡು ಪಂದ್ಯುಗಳಲ್ಲಿ ವಿನ್ನಿಂಗ್ಸ್ ಆಟ ಪ್ರದರ್ಶಿಸಿದ್ದರು. ನಿನ್ನೆ 13 ರನ್ ಗಳಿಸಿ ಔಟ್ ಆದಾಗ ಒಡತಿಯ ಸಂಭ್ರಕ್ಕೆ ಪಾರವೇ ಇರಲಿಲ್ಲ.
ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ನಂತರ ಕೃನಾಲ್ ಪಾಂಡ್ಯ ಮತ್ತು ನಾಯಕ ಕೆಎಲ್ ರಾಹುಲ್ ಉತ್ತಮ ಇನ್ನಿಂಗ್ಸ್ ಕಟ್ಟಿ ತಂಡದ ಗೆಲುವಿನ ಕಾರಣರಾದರು. ಇದರಿಂದ ಎರಡನೇ ಸೋಲು ಕಂಡ ಸನ್ ರೈಸರ್ಸ್ ಅಂಕಪಟ್ಟಿಯ ಕೊನೆ ಸ್ಥಾನಕ್ಕೆ ಕುಸಿಯಿತು. ಒಂದು ಪಂದ್ಯ ಆಡಿ ಅದರಲ್ಲಿ ಸೋಲು ಕಂಡಿರುವ ಮುಂಬೈ 9ನೇ ಸ್ಥಾನದಲ್ಲಿದೆ.