ಚೆನ್ನೈ:ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೇವಲ 4 ಪಂದ್ಯಗಳನ್ನಾಡಿ ಟೂರ್ನಿಯಿಂದ ಹೊರಬಿದ್ದಿದ್ದ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಇದೀಗ ತಂಡಕ್ಕೆ ಸೇರಿಕೊಂಡಿದ್ದು, ಸನ್ರೈಸರ್ಸ್ ಹೈದರಾಬಾದ್ಕ್ಕೆ ಶಕ್ತಿ ತುಂಬಿದೆ.
ಇಂಗ್ಲೆಂಡ್ ವಿರುದ್ಧ ಮುಕ್ತಾಯಗೊಂಡ ನಿಗದಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಈಗಾಗಲೇ ಅದ್ಭುತ ಪ್ರದರ್ಶನ ನೀಡಿರುವ ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಹೈದರಾಬಾದ್ ಕ್ಯಾಪ್ಟನ್ ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ನಮಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದಿದ್ದಾರೆ.
ನಮ್ಮ ತಂಡ ಎಲ್ಲ ವಿಭಾಗಗಳಲ್ಲೂ ಸಮತೋಲನದಿಂದ ಕೂಡಿದ್ದು, ಈ ಸಲದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ತಂಡ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭ ಮಾಡಲಿದೆ.
ಇದನ್ನೂ ಓದಿ: ಐಪಿಎಲ್ಗೆ ಚಾಲನೆ: ಮುಂಬೈ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್!
ಚೆನ್ನೈ ಹಾಗೂ ಡೆಲ್ಲಿಯಲ್ಲಿ ನಾವು ಮೊದಲ 8-9 ಪಂದ್ಯಗಳನ್ನಾಡುತ್ತಿದ್ದು, ಇಲ್ಲಿ ವಿಕೆಟ್ ಸ್ವಲ್ಪ ನಿಧಾನವಾಗಿರುತ್ತವೆ ಎಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದ ಹೈದರಾಬಾದ್ ಕ್ವಾಲಿಫೈಯರ್ 2ನಲ್ಲಿ ಸೋಲು ಕಂಡಿತ್ತು. ಆದರೆ, ಈ ಸಲ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದು, ಚಾಂಪಿಯನ್ ಆಗುವ ಇರಾದೆ ಇಟ್ಟುಕೊಂಡಿದೆ.