ಚೆನ್ನೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ವಿಚಾರವಾಗಿ ಉಳಿದ ತಂಡಗಳು ಅಸಮಾಧಾನ ಹೊರಹಾಕಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕೊರೊನಾ ವೈರಸ್ ಸೋಂಕಿಗೊಳಗಾಗಿದ್ದ ಪ್ಲೇಯರ್ ದೇವದತ್ ಪಡಿಕ್ಕಲ್ ವರದಿ ಈಗಾಗಲೇ ನೆಗೆಟಿವ್ ಬಂದಿದೆ. ಇದಾದ ಬಳಿಕ ಅವರಿಗೆ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ನೀಡುವ ಬದಲು ತಂಡದಲ್ಲಿ ಸೇರ್ಪಡೆ ಮಾಡಿಕೊಂಡಿರುವುದು ಇತರ ತಂಡಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಆರ್ಸಿಬಿ ತಂಡ ಈಗಾಗಲೇ ಬಯೋ ಬಬಲ್ಗೆ ಪ್ರವೇಶ ಪಡೆದುಕೊಂಡಿದ್ದು, ದೇವದತ್ ಪಡಿಕ್ಕಲ್ ಕೂಡ ಇದರಲ್ಲಿದ್ದಾರೆ. ಇದು ಇತರ ಪ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಾರ್ಚ್ 22ರಂದು ಕೋವಿಡ್ ಸೋಂಕಿಗೊಳಗಾಗಿದ್ದ ಈ ಪ್ಲೇಯರ್ ಕ್ವಾರಂಟೈನ್ಗೊಳಗಾಗಿದ್ದರು. ಆದಾದ ಬಳಿಕ ನೆಗೆಟಿವ್ ವರದಿ ಬಂದಿದ್ದು, ಏಪ್ರಿಲ್ 7ರಂದು ಬೆಂಗಳೂರಿನಿಂದ ನೇರವಾಗಿ ಚೆನ್ನೈಗೆ ಬಂದು ಬಯೋ ಬಬಲ್ ಸೇರಿಕೊಂಡಿದ್ದಾರೆ. ಇದೇ ವಿಚಾರ ಇತರ ಪ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ದೇವದತ್ ಪಡಿಕ್ಕಲ್ ಕೋವಿಡ್ ಟೆಸ್ಟ್ ಮತ್ತೆ ನೆಗೆಟಿವ್: ಆರ್ಸಿಬಿ ಸೇರಿದ ಯುವ ಓಪನರ್