ನವದೆಹಲಿ:ಪಂದ್ಯದಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ 5 ಸಿಕ್ಸರ್ ಬಾರಿಸಿ ಪಂದ್ಯಕ್ಕೆ ಭರ್ಜರಿ ಟರ್ನಿಂಗ್ ನೀಡಿ ಕೆಕೆಆರ್ ತಂಡದ ಗೆಲುವಿನ ರೂವಾರಿಯಾದರು. ಈವರೆಗಿನ ಐಪಿಎಲ್ ಆವೃತ್ತಿಗಳಲ್ಲೇ 20ನೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಈ ಪಂದ್ಯದಲ್ಲಿ ಮೂಡಿ ಬಂದಿದೆ. ರಿಂಕು ಸಿಂಗ್ ಸತತ ಸಿಕ್ಸರ್ ಬಾರಿಸುವ ಮೂಲಕ ಈ ಹಿಂದೆ ಐಪಿಎಲ್ ಟೂರ್ನಿಯ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ್ದ ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ ಮತ್ತು ರವೀಂದ್ರ ಜಡೇಜಾ ಅವರಂತಹ ಘಟಾನುಘಟಿ ಆಟಗಾರರ ಪಟ್ಟಿ ಸೇರಿದ್ದಾರೆ. ಇವರಲ್ಲಿ ಗೇಲ್ ಹಾಗೂ ರಿಂಕು ಬ್ಯಾಟ್ನಿಂದ ಸತತ ಐದು ಸಿಕ್ಸರ್ ಮೂಡಿ ಬಂದಿರುವುದು ವಿಶೇಷ.
2012ರಲ್ಲಿ ಕ್ರಿಸ್ ಗೇಲ್ ಅವರು ರಾಹುಲ್ ಶರ್ಮಾ ಬೌಲಿಂಗ್‌ನಲ್ಲಿ ಸತತ ಐದು ಸಿಕ್ಸರ್ (1, 6, 6, 6, 6, 6) ಬಾರಿಸಿದ್ದರು. 2020ರಲ್ಲಿ ಶೆಲ್ಡನ್ ಕಾಟ್ರೆಲ್ ಅವರ ಓವರ್‌ನಲ್ಲಿ ರಾಹುಲ್ ತೆವಾಟಿಯಾ ಐದು ಸಿಕ್ಸರ್ (6, 6, 6, 6, 6) ಬಾರಿಸಿ ಸ್ಫೋಟಕ ಇನ್ನಿಂಗ್ಸ್ ಪ್ರದರ್ಶಿಸಿದ್ದರು. 2021ರಲ್ಲಿ ರವೀಂದ್ರ ಜಡೇಜಾ ಅವರು ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ 5 ಸಿಕ್ಸರ್ (6, 6, NB+6, 6, 2, 6, 4) ದಾಖಲಿಸಿದ್ದರು. ನಿನ್ನೆಯ ಪಂದ್ಯದಲ್ಲಿ ಯಶ್ ದಯಾಳ್ ವಿರುದ್ಧ ರಿಂಕು ಅತ್ಯುನ್ನತ ಪ್ರದರ್ಶನ ನೀಡಿದ ವಿಶ್ವ ಕ್ರಿಕೆಟ್ ಗಮನ ಸೆಳೆದರು.