ಕರ್ನಾಟಕ

karnataka

ETV Bharat / sports

IPL​ನಲ್ಲಿ ಧವನ್‌ ಧಮಾಕ: ರೈನಾ ದಾಖಲೆ ಮುರಿದು ಮುನ್ನುಗ್ಗುತ್ತಿರುವ ರನ್ ಮಷಿನ್‌ - ಐಪಿಎಲ್​​ -2021

ನಿನ್ನೆ ಮೊಟೇರಾ​ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಧವನ್​​ ಹೊಸ ದಾಖಲೆ ಬರೆದರು.

ಶಿಖರ್​ ಧವನ್​
ಶಿಖರ್​ ಧವನ್​

By

Published : Apr 30, 2021, 9:11 AM IST

ಅಹಮದಾಬಾದ್:ಈ ಬಾರಿಯ ಐಪಿಎಲ್​ನಲ್ಲಿ ಗಬ್ಬರ್​ ಸಿಂಗ್ ಜನಪ್ರಿಯತೆಯ ಕ್ರಿಕೆಟಿಗ ಶಿಖರ್​ ಧವನ್​ ಅಬ್ಬರ ಜೋರಾಗಿದೆ. ಮೊದಲ ಪಂದ್ಯದಿಂದಲೇ ಅವರ ಬ್ಯಾಟ್‌ನಿಂದ ರನ್ ಹೊಳೆ ಹರಿದುಬರುತ್ತಿದ್ದು ಸದ್ಯ 311 ರನ್ ಗಳಿಸಿ ಆರೆಂಜ್​ ಕ್ಯಾಪ್​ ಗೌರವ ಪಡೆದಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ 183 ಪಂದ್ಯ ಆಡಿರುವ ಧವನ್ 182 ಇನ್ನಿಂಗ್ಸ್‌ಗಳಲ್ಲಿ 34.86ರ ಸರಾಸರಿಯಲ್ಲಿ 5,508 ರನ್ ಪೇರಿಸಿದ್ದಾರೆ. ಅತ್ತ ಮೂರನೇ ಸ್ಥಾನದಲ್ಲಿರುವ ರೈನಾ 5,489 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಈ ಸೀಸನ್​​ನಲ್ಲೆ ವಿರಾಟ್ ಐಪಿಎಲ್‌ನಲ್ಲಿ 6,000 ರನ್‌ಗಳ ಮೈಲಿಗಲ್ಲು ತಲುಪಿದ್ದು, ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಗರಿಷ್ಠ ರನ್ ಸರದಾರರು:

  • ವಿರಾಟ್ ಕೊಹ್ಲಿ- 6,041
  • ಶಿಖರ್ ಧವನ್- 5,508
  • ಸುರೇಶ್ ರೈನಾ- 5,489
  • ಡೇವಿಡ್ ವಾರ್ನರ್- 5,447
  • ರೋಹಿತ್ ಶರ್ಮಾ- 5,445
  • ಎಬಿ ಡಿ ವಿಲಿಯರ್ಸ್- 5,053

ಇದನ್ನೂ ಓದಿ: WATCH: ಓವರ್​ನಲ್ಲಿ 6 ಬೌಂಡರಿ ಸಿಡಿಸಿ ಪೃಥ್ವಿ 'ಶೋ'; ಪಂದ್ಯದ ನಂತರ ಶಿವಂ ಸೇಡು ಹೀಗಿತ್ತು..

For All Latest Updates

ABOUT THE AUTHOR

...view details