ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್‌ರೈಡರ್ಸ್ ನಡುವಿನ ಪಂದ್ಯದಲ್ಲಿ ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ವೈಖರಿಯನ್ನು ರಿಷಭ್ ಪಂತ್ ಪ್ರಶಂಸಿಸಿದರು.
ಆತ ಅತ್ಯಂತ ಪ್ರತಿಭಾವಂತ ಆಟಗಾರ. ಫಾರ್ಮ್ ಕಂಡುಕೊಂಡರೆ ಹಲವು ದಾಖಲೆಗಳನ್ನು ಬರೆಯುವ ಸಾಮರ್ಥ್ಯ ಆತನಲ್ಲಿದೆ ಎಂದಿದ್ದಾರೆ.

'ಪೃಥ್ವಿ ಆಟದ ಬಗ್ಗೆ ನಮಗೆ ಅರಿವಿದೆ. ಅವನಿಗೆ ಆತ್ಮವಿಶ್ವಾಸ ತುಂಬಿದರೆ ಒಳ್ಳೆಯ ಆಟವಾಡುತ್ತಾನೆ. ನಾವು ಕ್ರಿಕೆಟ್ ಆಟವನ್ನು ಆನಂದಿಸಬೇಕು. ತಂಡಕ್ಕೆ ನಮ್ಮ ಸಾಮರ್ಥ್ಯ ಮೀರಿ ಕೊಡುಗೆ ನೀಡಲು ಬಯಸಬೇಕು' ಎಂದು ಪಂತ್ ಹೇಳಿದರು.
'ಲಲಿತ್ ಯಾದವ್ ಒಳ್ಳೆಯ ಆಲ್‌ರೌಂಡರ್. ಬ್ಯಾಟಿಂಗ್ ಮಾಡಲು ಅವನಿಗೆ ಅವಕಾಶ ಸಿಕ್ಕಿಲ್ಲ. ಆದರೆ ಅದ್ಭುತ ಆಲ್ ರೌಂಡರ್. ಕೊನೆಯ ಪಂದ್ಯದಲ್ಲಿ ನಾವು ಕೇವಲ ಒಂದು ರನ್‌ನಿಂದ ಮಾತ್ರ ಸೋತಿದ್ದೇವೆ, ಆದ್ದರಿಂದ ತಂಡದಲ್ಲಿ ಬದಲಾವಣೆ ಬಯಸಿದ್ದೆವು' ಎಂದು ಅವರು ಹೇಳಿದರು.
ಇದನ್ನೂ ಓದಿ : ಆರ್ಸಿಬಿ vs ಪಂಜಾಬ್ ಹೈ ವೋಲ್ಟೇಜ್ ಪಂದ್ಯ: ಗೆಲುವಿಗಾಗಿ ಸಂಜೆ ಹಾಲಿ-ಮಾಜಿಗಳ ಫೈಟ್