ಕರ್ನಾಟಕ

karnataka

ETV Bharat / sports

ಐಪಿಎಲ್​​ ಫೈನಲ್​​: ಡುಪ್ಲೆಸಿ ಸ್ಫೋಟಕ ಬ್ಯಾಟಿಂಗ್​: ಕೋಲ್ಕತ್ತಾ ಗೆಲುವಿಗೆ 193 ರನ್​ಗಳ ಟಾರ್ಗೆಟ್​ - ಕೋಲ್ಕತ್ತಾ ನೈಟ್ ರೈಡರ್ಸ್​

ಡುಪ್ಲೆಸಿ ಅವರ ಬಿರುಸಿನ ಆಟದ ನೆರವಿನಿಂದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 192 ರನ್​ ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 193 ರನ್​​ಗಳ ಸ್ಪರ್ಧಾತ್ಮಕ ಟಾರ್ಗೆಟ್​ ನೀಡಿದೆ.

IPL 2021, FINAL
IPL 2021, FINAL

By

Published : Oct 15, 2021, 9:33 PM IST

Updated : Oct 15, 2021, 11:19 PM IST

ದುಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಮುಖಾಮುಖಿಯಾಗಿದ್ದು, ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಧೋನಿ ಬಳಗ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 192 ರನ್ ​ಗಳಿಕೆ ಮಾಡಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಕಣಕ್ಕಿಳಿದ ಸಿಎಸ್​ಕೆ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್​​ ಆಟಕ್ಕೆ ಮೊರೆ ಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್ ಹಾಗೂ ಡುಪ್ಲೆಸಿ ಜೋಡಿ ಮತ್ತೊಮ್ಮೆ ಉತ್ತಮ ಜೊತೆಯಾಟವಾಡಿದರು. ಈ ಜೋಡಿ8 ಓವರ್​ಗಳಲ್ಲಿ 60ರನ್​ಗಳಿಕೆ ಮಾಡಿತು. ಆದರೆ, 32ರನ್​ಗಳಿಕೆ ಮಾಡಿದ ಗಾಯಕ್ವಾಡ್​ ನರೈನ್​ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ಒಂದಾದ ಉತ್ತಪ್ಪ- ಡುಪ್ಲೆಸಿ ಜೋಡಿ ಎದುರಾಳಿ ಬೌಲರ್​ಗಳನ್ನ ಚೆಂಡಾಡಿದರು. ಹೀಗಾಗಿ 13.3 ಓವರ್​​ಗಳಲ್ಲಿ 124ರನ್​ಗಳ ಪೇರಿಸಿದರು. ಈ ವೇಳೆ, ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್​ ಸೇರಿದಂತೆ 31ರನ್​ಗಳಿಕೆ ಮಾಡಿದಾಗ ನರೈನ್ ಓವರ್​ನಲ್ಲಿ ಉತ್ತಪ್ಪ ವಿಕೆಟ್​ ಒಪ್ಪಿಸಿದರು.

ಕೊನೆಯವರೆಗೆ ಬ್ಯಾಟ್​​ ಬೀಸಿದ ಡುಪ್ಲೆಸಿ

ಉತ್ತಪ್ಪ ವಿಕೆಟ್​ ಬೀಳುತ್ತಿದ್ದಂತೆ ಮೊಯಿನ್​ ಅಲಿ ಜೊತೆ ಸೇರಿ ಆರ್ಭಟಿಸಿದ ಡುಪ್ಲೆಸಿ ತಾವು ಎದುರಿಸಿದ 59 ಎಸೆತಗಳಲ್ಲಿ 3 ಸಿಕ್ಸರ್​, 7ಬೌಂಡರಿ ಸೇರಿದಂತೆ 86ರನ್​ಗಳಿಕೆ ಮಾಡಿದರು. ಇವರಿಗೆ ಮೊಯಿನ್​ ಅಲಿ ಉತ್ತಮ ಸಾಥ್ ನೀಡಿದರು. ತಾವು ಎದುರಿಸಿದ 20 ಎಸೆತಗಳಲ್ಲಿ 3 ಸಿಕ್ಸರ್​, 2 ಬೌಂಡರಿ ಸೇರಿದಂತೆ ಅಜೇಯ 37ರನ್​ಗಳಿಕೆ ಮಾಡಿದರು. ಆದರೆ, ಡುಪ್ಲೆಸಿ ಕೊನೆ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ಹೀಗಾಗಿ ತಂಡ 20 ಓವರ್​ಗಳಲ್ಲಿ 3ವಿಕೆಟ್​ನಷ್ಟಕ್ಕೆ 192ರನ್​ಗಳಿಕೆ ಮಾಡಿ ಎದುರಾಳಿಗೆ 193ರನ್​ಗಳ ಗುರಿ ನೀಡಿದೆ.

ಕೋಲ್ಕತ್ತಾ ಪರ ನರೈನ್ ತಲಾ 2 ವಿಕೆಟ್ ಪಡೆದುಕೊಂಡರೆ ಮಾವಿ 1 ವಿಕೆಟ್ ಕಿತ್ತರು. ಉಳಿದಂತೆ ಯಾವುದೇ ಬೌಲರ್​​ ಮಾರಕವಾಗಿ ಪರಿಣಮಿಸಲಿಲ್ಲ.

Last Updated : Oct 15, 2021, 11:19 PM IST

ABOUT THE AUTHOR

...view details