ಕರ್ನಾಟಕ

karnataka

ETV Bharat / sports

DC vs RCB: ಫಿಲಿಪ್ ಸಾಲ್ಟ್ ಅಬ್ಬರ, ಡೆಲ್ಲಿ ವಿರುದ್ಧ ಆರ್​ಸಿಬಿಗೆ 7 ವಿಕೆಟ್​ನ ಸೋಲು

ಆರ್​ಸಿಬಿ ಕೊಟ್ಟಿದ್ದ 182 ರನ್​ನ ಸ್ಪರ್ಧಾತ್ಮಕ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್​ 16.4 ಓವರ್​ನಲ್ಲಿ ಗೆದ್ದು ಬೀಗಿದೆ.

DDelhi Capitals vs Royal Challengers Bangalore Match Score update
DC vs RCB: ವಿರಾಟ್​, ಮಹಿಪಾಲ್ ಅರ್ಧಶತಕ: ಡೆಲ್ಲಿಗೆ 182 ರನ್​ನ ಗುರಿ

By

Published : May 6, 2023, 7:13 PM IST

Updated : May 6, 2023, 11:08 PM IST

ನವದೆಹಲಿ:ಫಿಲಿಪ್ ಸಾಲ್ಟ್ ಅವರ ಅಬ್ಬರದ 87 ರನ್​ನ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್​ 16.4 ಓವರ್​ನಲ್ಲಿ 3 ವಿಕೆಟ್​ ಕಳೆದುಕೊಂಡು ಆರ್​ಸಿಬಿ ಕೊಟ್ಟಿದ್ದ 182 ರನ್​ ಗಳಿಸಿ ವಿಜಯ ಸಾಧಿಸಿದೆ. ವಿರಾಟ್​ ಹಾಗೂ ಮಹಿಪಾಲ್​ ಅವರ ಅರ್ಧಶತಕದ ಆಟ ಸಾಲ್ಟ್​ ಅವರ ಅಬ್ಬರದ ಮುಂದೆ ಕೊಚ್ಚಿಹೋಯಿತು. ಇದರಿಂದ ಡೆಲ್ಲಿ 7 ವಿಕೆಟ್​ನಿಂದ ಗೆದ್ದುಕೊಂಡಿದೆ.

ಇದಕ್ಕೂ ಮುನ್ನವಿರಾಟ್​ ಕೊಹ್ಲಿ, ಮಹಿಪಾಲ್ ಲೊಮ್ರೋರ್ ಅರ್ಧಶತಕ ಮತ್ತು ಫಾಫ್​ 45 ರನ್​ನ ಕೊಡುಗೆಯಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿಗದಿತ ಓವರ್​ ಅಂತ್ಯಕ್ಕೆ 4 ವಿಕೆಟ್​ ನಷ್ಟದಿಂದ 181 ರನ್​ ಗಳಿಸಿದೆ. ಪವರ್​ ಪ್ಲೇ ನಂತರ ರನ್​ ವೇಗಕ್ಕೆ ಮೇಲೆ ಕಡಿವಾಣ ಹಾಕಿದ್ದ ಡೆಲ್ಲಿ ಬೌಲರ್​ಗಳು ಕೊನೆಯ ಓವರ್​ಗಳಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ 182 ರನ್​ ಗುರಿಯನ್ನು ಎದುರಿಸಬೇಕಾಯುತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಬಂದ ಆರ್​ಸಿಬಿ ಉತ್ತಮ ಆರಂಭ ಪಡೆಯಿತು. ವಿರಾಟ್​ ಮತ್ತು ಫಾಫ್​ ಡು ಪ್ಲೆಸಿಸ್​ 82 ರನ್​ಗಳ ಜೊತೆಯಾಟ ಮಾಡಿದರು. ಈ ಜೋಡಿ ಪವರ್​ ಪ್ಲೇಯಲ್ಲಿ ವೇಗವಾಗಿ ರನ್​ ಕಲೆ ಹಾಕಿದರೆ, ನಂತರ ನಿಧಾನ ಗತಿಯಲ್ಲಿ ಸಾಗಿತು. ಇದರಿಂದ 10 ಓವರ್​ ಅಂತ್ಯಕ್ಕೆ ತಂಡದ ಮೊತ್ತ ವಿಕೆಟ್​ ನಷ್ಟವಿಲ್ಲದೇ 79 ಆಗಿತ್ತು.

11ನೇ ಓವರ್​ನ 3ನೇ ಬಾಲ್​ನಲ್ಲಿ ನಾಯಕ ಫಾಫ್​ ವಿಕೆಟ್​ ಕೊಟ್ಟರು. 32 ಬಾಲ್​ ಆಡಿದ್ದ ಡು ಪ್ಲೆಸಿಸ್​ 1 ಸಿಕ್ಸ್​ ಮತ್ತು 5 ಬೌಂಡರಿಯ ಸಹಾಯದಿಂದ 45 ರನ್​ ಗಳಿಸಿದ್ದರು. 5 ರನ್​ನಿಂದ ನಾಯಕ ಅರ್ಧಶತಕ ವಂಚಿತರಾದರು. ಅವರ ಬೆನ್ನಲ್ಲೇ ಬಂದ ಹೊಡಿಬಡಿ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಶೂನ್ಯಕ್ಕೆ ವಿಕೆಟ್​ ಕೊಟ್ಟರು. ಮಿಚೆಲ್​ ಮಾರ್ಷ್​ ಒಂದೇ ಓವರ್​ನಲ್ಲಿ ಆರ್​ಸಿಬಿಯ ಫಾಫ್​ ಮತ್ತು ಮ್ಯಾಕ್ಸಿಯ ವಿಕೆಟ್​ ಪಡೆದು ಸಂಭ್ರಮಿಸಿದರು.

ಆರ್​ಸಿಬಿಯ ಬ್ಯಾಟಿಂಗ್​ ಬಲವಾಗಿದ್ದ ಕೆಜಿಎಫ್​ನಲ್ಲಿ, ಜಿ ಮತ್ತು ಎಫ್​ನ ವಿಕೆಟ್​ ಬಿದ್ದ ನಂತರ ಮಹಿಪಾಲ್ ಲೊಮ್ರೋರ್ ವಿರಾಟ್​ ಜೊತೆಗೂಡಿದರು. ಈ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಮತ್ತೆ 55 ರನ್​ನ ಜೊತೆಯಾಟ ಆಡಿತು. ಇದರಿಂದ ಆರ್​ಸಿಬಿ 130 ರನ್ ​ಗಡಿ ದಾಟಿತು.

7000 ರನ್​ ಪೂರೈಸಿದ ವಿರಾಟ್​:ವಿರಾಟ್​ ಕೊಹ್ಲಿ 46 ಬಾಲ್​ ಎದುರಿಸಿ ಐದು ಬೌಂಡರಿಯ ಸಹಾಯದಿಂದ 55 ರನ್​ ಗಳಿಸಿ ಔಟ್​ ಆದರು. ಇದಕ್ಕೂ ಮುನ್ನ ವಿರಾಟ್​ 233ನೇ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ವಿರುದ್ಧ ಕಟ್ ಶಾಟ್‌ನೊಂದಿಗೆ 7000 ರನ್ ಗಡಿ ದಾಟಿದರು. ಈ ದಾಖಲೆ ಬರೆದ ಮೊದಲ ಬ್ಯಾಟರ್​ ಎಂಬ ಖ್ಯಾತಿಗೆ ಒಳಗಾದರು.

ಮಹಿಪಾಲ್ ಲೊಮ್ರೋರ್ ಅಜೇಯ ಇನ್ನಿಂಗ್ಸ್​ ಕಟ್ಟಿದರು. ಅವರು ತಮ್ಮ ಐಪಿಎಲ್​ನ ಮೊದಲ ಅರ್ಧಶತಕವನ್ನೂ ಪೂರೈಸಿದರು. 29 ಬಾಲ್​ ಎದುರಿಸಿದ ಮಹಿಪಾಲ್​ ಅವರು 3 ಸಿಕ್ಸ್​ ಮತ್ತು 6 ಬೌಂಡರಿಗಳಿಂದ 54 ರನ್​ ಕಲೆಹಾಕಿದರು. ದಿನೇಶ್​ ಕಾರ್ತಿಕ್​ 11 ರನ್​ ಕಲೆಹಾಕಿ ಔಟ್​ ಆದರೆ, ಕೊನೆಯ ಓವರ್​ನಲ್ಲಿ ಬಂದ ಅನುಜ್ ರಾವತ್ ಅಜೇಯ 8 ರನ್​ ಗಳಿಸಿದರು. ಡೆಲ್ಲಿ ಪರ ಮಿಚೆಲ್​ ಮಾರ್ಷ್​ 2, ಮುಖೇಶ್​ ಕುಮಾರ್​ ಮತ್ತು ಖಲೀಲ್​ ಅಹಮ್ಮದ್​ ತಲಾ ಒಂದು ವಿಕೆಟ್​ ಕಿತ್ತರು.

ತಂಡಗಳು ಇಂತಿವೆ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು:ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(ವಿಕೆಟ್​ ಕೀಪರ್​), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್

ಡೆಲ್ಲಿ ಕ್ಯಾಪಿಟಲ್ಸ್​:ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್​ ಕೀಪರ್​), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್

ಇದನ್ನೂ ಓದಿ:IPL 2023: ಡಕ್​ ಔಟ್​ನಲ್ಲಿ ದಾಖಲೆ ಬರೆದ ರೋಹಿತ್​ ಶರ್ಮಾ

Last Updated : May 6, 2023, 11:08 PM IST

ABOUT THE AUTHOR

...view details