ಕರ್ನಾಟಕ

karnataka

ETV Bharat / sports

IPL ಪ್ಲೇಆಫ್‌ನ ಪ್ರತಿ ಡಾಟ್​ ಬಾಲ್​ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ

ಐಪಿಎಲ್​ನ ಪ್ಲೇಆಫ್‌​ ಪಂದ್ಯಗಳಲ್ಲಿ ಪ್ರತಿ ಡಾಟ್​ ಬಾಲ್​ಗೆ 500 ಸಸಿ ನೆಡುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದೆ.

ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಯೋಜನೆ
ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಯೋಜನೆ

By

Published : May 24, 2023, 8:00 AM IST

ಚೆನ್ನೈ:ವಿಶ್ವದಸಿರಿವಂತ ದೇಶೀಯ ಕ್ರಿಕೆಟ್ ಪಂದ್ಯಾವಳಿಯಾದ ಇಂಡಿಯನ್​​ ಪ್ರೀಮಿಯರ್​ ಲೀಗ್​(ಐಪಿಎಲ್​​) ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ಲೇಆಫ್‌​ ಪಂದ್ಯಗಳಲ್ಲಿ ಪ್ರತಿ ಡಾಟ್​ ಬಾಲ್​ಗೆ 500 ಸಸಿಗಳನ್ನು ನೆಡಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ವಾಗ್ದಾನ ಮಾಡಿದೆ. ಈ ಮೂಲಕ ಪರಿಸರ ಕಾಳಜಿಯನ್ನು ಮೆರೆದಿದೆ. ಬಿಸಿಸಿಐನ ಈ ಅದ್ಭುತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನಿನ್ನೆ (ಮಂಗಳವಾರ) ರಾತ್ರಿ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಸೆಣಸಾಡಿದವು. ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ಗೆ ಗುದ್ದು ನೀಡುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲ ತಂಡವಾಗಿ ನೇರವಾಗಿ ಫೈನಲ್​ ತಲುಪಿತು. ಸೋತ ಗುಜರಾತ್​ಗೆ ಫೈನಲ್​ ತಲುಪಲು ಮತ್ತೊಂದು ಅವಕಾಶವಿದೆ. ಪಂದ್ಯದ ರೋಚಕತೆಯ ಮಧ್ಯೆ ಗಮನ ಸೆಳೆದಿದ್ದು, ಟಿವಿ ಪರದೆ ಮೇಲೆ ಸ್ಕೋರ್​ ಬೋರ್ಡ್​ನಲ್ಲಿನ ಹಸಿರು ಮರದ ಗ್ರಾಫಿಕ್​.

ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಯೋಜನೆ

ಪ್ರತಿ ಡಾಟ್​ ಬಾಲ್​ಗೆ 500 ಸಸಿ:ಪರದೆ ಮೇಲೆ ಕಾಣಿಸುತ್ತಿದ್ದ ಸ್ಕೋರ್​​ ಬೋರ್ಡ್​ನಲ್ಲಿ ಡಾಟ್​ ಬಾಲ್​ ಆದಾಗ ಮರದ ಗ್ರಾಫಿಕ್​​ ಪ್ರದರ್ಶಿಸಲಾಗುತ್ತಿತ್ತು. ಮೊದಲು ಇದೇನು? ಎಂಬುದು ಯಾರಿಗೂ ತಿಳಿದಿರಲಿಲ್ಲ. ಬಳಿಕ ವೀಕ್ಷಣೆ ವಿವರಣೆಗಾರರು ಈ ಬಗ್ಗೆ ಮಾಹಿತಿ ನೀಡಿದ್ದು ಮಹತ್ವದ ವಿಷಯ ಬಹಿರಂಗವಾಯಿತು. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದು, ಅದನ್ನು ಐಪಿಎಲ್​ನ ಪ್ಲೇಆಫ್‌​ ಪಂದ್ಯಗಳಲ್ಲಿ ಜಾರಿ ಮಾಡಿದೆ. ಪ್ಲೇ ಆಫ್‌​ ಪಂದ್ಯಗಳಲ್ಲಿ ಎಸೆತ ಡಾಟ್​ ಆದಲ್ಲಿ ಪ್ರತಿ ಬಾಲ್​ಗೂ 500 ಸಸಿ ನೆಡಲಾಗುವುದು ಎಂದು ತಿಳಿಸಿದೆ.

ಗಮನ ಸೆಳೆದ ಮರದ ಗ್ರಾಫಿಕ್​:ಟಿವಿ ಪರದೆಯ ಮೇಲೆ ಸ್ಕೋರ್​ ಬೋರ್ಡ್​ನಲ್ಲಿ ಎಸೆತ ಡಾಟ್​ ಆದಾಗ ಆ ಜಾಗದಲ್ಲಿ ಮರದ ಗ್ರಾಫಿಕ್ ಅನ್ನು ತೋರಿಸಲಾಗುತ್ತಿತ್ತು. ಡಾಟ್ ಬಾಲ್ ಚಿಹ್ನೆಯ ಜಾಗದಲ್ಲಿ ಹಸಿರು ಮರ ತೋರಿಸುವ ಮೂಲಕ ಎಷ್ಟು ಡಾಟ್​ ಬಾಲ್​ ಆದವು ಎಂಬ ಅಂಕಿ- ಸಂಖ್ಯೆಯನ್ನೂ ಪ್ರದರ್ಶಿಸಲಾಗುತ್ತಿದೆ. ಪ್ರತಿ ಡಾಟ್​​ ಬಾಲ್​ಗೆ 500 ಮರಗಳು ನೆಡಲಾಗುವುದು ಎಂದು ಘೋಷಿಸಿರುವ ಬಿಸಿಸಿಐ, ಅವುಗಳನ್ನು ಎಲ್ಲಿ, ಯಾವ ನಗರದಲ್ಲಿ ನೆಡಲಿದೆ ಎಂಬುದು ಮುಂದೆ ತಿಳಿದುಬರಲಿದೆ.

ಗ್ರೀನ್​ ಟ್ರೀ ಅಭಿಯಾನಕ್ಕೆ ಮೆಚ್ಚುಗೆ:ಬಿಸಿಸಿಐನ ಉತ್ತಮ ನಿರ್ಧಾರಕ್ಕೆ ಕ್ರಿಕೆಟ್​ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಮೀಮ್ಸ್​ ಹಾಕಲಾಗಿದೆ. ಐಪಿಎಲ್​ ಮುಗಿದ ಬಳಿಕ ಭಾರತ ಹೀಗಾಗಲಿದೆ ಎಂದು ಹಚ್ಚಹಸಿರ ಅರಣ್ಯದ ಚಿತ್ರವನ್ನು ಹಾಕಲಾಗಿದೆ. ಮೊದಲ ಕ್ವಾಲಿಫೈಯರ್​ನ ಸಿಎಸ್​ಕೆ ಇನಿಂಗ್ಸ್​ನಲ್ಲಿ ಒಟ್ಟು 34 ಎಸೆತಗಳು ಡಾಟ್​ ಆಗಿವೆ. ಇದರಿಂದ ಸಿಎಸ್​​ಕೆ 17,000 ಸಸಿಗಳನ್ನು ನೆಡುವ ಅಭಿಯಾನಕ್ಕೆ ಅಭಿದಾನ ನೀಡಿತು.

ಇನ್ನು, ಪಂದ್ಯದಲ್ಲಿ ಸಿಎಸ್​ಕೆ ಅದ್ಭುತ ಪ್ರದರ್ಶನ ನೀಡಿ ಫೈನಲ್​ ಟಿಕೆಟ್​ ಪಡೆದುಕೊಂಡಿತು. ಟಾಸ್​ ಸೋತರೂ ಮೊದಲು ಬ್ಯಾಟ್​ ಮಾಡಿದ ತಂಡ ಆರಂಭಿಕರಾದ ಡೆವೋನ್ ಕಾನ್ವೆ ಮತ್ತು ಋತುರಾಜ್ ಗಾಯಕ್ವಾಡ್ ಅವರ ಮತ್ತೊಂದು ಅದ್ಭುತ ಇನಿಂಗ್ಸ್​ನಿಂದಾಗಿ 172 ರನ್​ ದಾಖಲಿಸಿತು. ಕಾನ್ವೆ- ಗಾಯಕ್ವಾಡ್​ ಜೋಡಿ ಈ ಆವೃತ್ತಿಯಲ್ಲಿ ಮೊದಲ ವಿಕೆಟ್​ಗೆ ಒಂಬತ್ತನೇ ಬಾರಿಗೆ 50+ ರನ್ ಜೊತೆಯಾಟ ನೀಡಿತು. ಇದಕ್ಕೂ ಮೊದಲು ಮುರಳಿ ವಿಜಯ್ ಮತ್ತು ಮೈಕೆಲ್ ಹಸ್ಸಿ 13 ಬಾರಿ ಆರಂಭಿಕ ಪಾಲುದಾರಿಕೆಯ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ:IPL 2023: 10ನೇ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟ ಚೆನ್ನೈ... ಸೋತ ಗುಜರಾತ್​ಗಿದೆ ಮತ್ತೊಂದು ಅವಕಾಶ

ABOUT THE AUTHOR

...view details