ಕರ್ನಾಟಕ

karnataka

ETV Bharat / sports

IPL is Back: ಬಾಲಿವುಡ್​ನ 'ಹೇ ಬೇಬಿ' ವಿಡಿಯೋ ಶೇರ್​ ಮಾಡಿ ಸಂಭ್ರಮಿಸಿದ ರಾಜಸ್ಥಾನ - ರಾಜಸ್ಥಾನ ರಾಯಲ್ಸ್​

14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಉಳಿದ ಪಂದ್ಯಗಳು ಇದೀಗ ಯುಎಇನಲ್ಲಿ ಆಯೋಜನೆಗೊಳ್ಳಲಿದ್ದು, ಇದರಿಂದ ಎಲ್ಲ ಫ್ರಾಂಚೈಸಿಗಳು ಸಂತಸಗೊಂಡಿವೆ.

Rajasthan Royals
Rajasthan Royals

By

Published : May 30, 2021, 4:05 AM IST

ಹೈದರಾಬಾದ್​:ಕೊರೊನಾ ವೈರಸ್​ನಿಂದಾಗಿ ಅರ್ಧಕ್ಕೆ ಮೊಟಕುಗೊಂಡಿರುವ ಇಂಡಿಯನ್​ ಪ್ರೀಮಿಯರ್ ಲೀಗ್​ ಇದೀಗ ಪುನಾರಂಭಗೊಳ್ಳಲಿದೆ. ಭಾರತೀಯ ಕ್ರಿಕೆಟ್​ ಮಂಡಳಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೀಗಾಗಿ ಅನೇಕ ಫ್ರಾಂಚೈಸಿಗಳು ಫುಲ್​ ಖುಷ್​ ಆಗಿವೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್​​-ಅಕ್ಟೋಬರ್ ತಿಂಗಳಲ್ಲಿ ಮುಂದೂಡಿಕೆಯಾಗಿರುವ ಐಪಿಎಲ್​ ಯುಎಇನಲ್ಲಿ ಆಯೋಜನೆಗೊಳ್ಳಲಿದೆ. ಮಹತ್ವದ ನಿರ್ಧಾರ ಹೊರಬರುತ್ತಿದ್ದಂತೆ ರಾಜಸ್ಥಾನ ರಾಯಲ್ಸ್​ ವಿಶೇಷ ವಿಡಿಯೋ ಶೇರ್​ ಮಾಡಿಕೊಂಡು ಸಂಭ್ರಮಿಸಿದೆ.

ರಾಜಸ್ಥಾನ ರಾಯಲ್ಸ್ ಟ್ವಿಟರ್​ ಅಕೌಂಟ್​ನಲ್ಲಿ ಹಿಂದಿಯ 'ಹೇ ಬೇಬಿ' ಹಾಡಿನ ತುಣುಕು ಪೋಸ್ಟ್​ ಮಾಡಿದೆ. ಇದರಲ್ಲಿ ತಮ್ಮ ತಂಡದ ಪ್ಲೇಯರ್ಸ್​ ಮುಖ ಮತ್ತು ಐಪಿಎಲ್​ ಲೋಗೋ ಅಟ್ಟಿಸಿದೆ. ಇದರ ಬೆನ್ನಲ್ಲೇ ಕಳೆದ ವರ್ಷದ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಕೂಡ ಸಂತಸಗೊಂಡಿದ್ದು, 'UAE, we are coming back' ಎಂದು ಬರೆದುಕೊಂಡಿದೆ.

ಭಾರತದಲ್ಲಿ ಆಯೋಜನೆಗೊಂಡಿದ್ದ ಇಂಡಿಯನ್​ ಪ್ರೀಮಿಯರ್ ಲೀಗ್​​ ಕೊರೊನಾ ಕಾರಣ ಮುಂದೂಡಿಕೆಯಾಗಿತ್ತು. ಟೂರ್ನಿ ವೇಳೆ ವಿವಿಧ ತಂಡದ ಪ್ಲೇಯರ್ಸ್​​ಗಳಿಗೆ ಸೋಂಕು ದೃಢಗೊಂಡಿತ್ತು. ಕಳೆದ ವರ್ಷ ಯುಎಇನಲ್ಲಿ ಆಯೋಜನೆಗೊಂಡಿದ್ದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಚಾಂಪಿಯನ್​ ಆಗಿತ್ತು.

ABOUT THE AUTHOR

...view details