ಮೆಲ್ಬೋರ್ನ್ :ಬಿಗ್ಬ್ಯಾಶ್ ಲೀಗ್ನಲ್ಲಿ ರನ್ಗಳ ಹೊಳೆಹರಿಸಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ಸೇರಿಕೊಂಡಿರುವ ಬೆನ್ ಮೆಕ್ರ್ಮಟ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಕ್ಕೆ ಕನಸು ಕಾಣುತ್ತಿದ್ದಾರೆ. ಬಿಬಿಎಲ್ನಲ್ಲಿ ನೀಡಿರುವ ಪ್ರದರ್ಶನ ಮುಂಬರುವ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯನ್ ಬ್ಯಾಟರ್ ಕಡೆ ಫ್ರಾಂಚೈಸಿಗಳು ಹೆಚ್ಚು ಗಮನ ಹರಿಸುವ ಸಾಧ್ಯತೆಯಿದೆ.
2022ರ ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು13ರಂದು ನಡೆಯಲಿದೆ. ಈಗಾಗಲೇ ಬಿಬಿಎಲ್ನಲ್ಲಿ ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿರುವ ಮೆಕ್ಡರ್ಮಟ್ ಐಪಿಎಲ್ ಹರಾಜಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ನನಗೆ ಅವಕಾಶ ಸಿಗದಿದ್ದರೆ, ಯಾವಾಗ ಸಿಗುಬಹುದು ಎನ್ನವುದರ ಕುರಿತು ನನಗೆ ಖಾತ್ರಿಯಿಲ್ಲ. ಈಗ ನಾನು ನೀಡಿರುವ ಪ್ರದರ್ಶನಕ್ಕಿಂತಲೂ ಇನ್ನೂ ಉತ್ತಮವಾಗಿ ಏನೂ ಮಾಡಲು ನನ್ನಿಂದ ಆಗುವುದಿಲ್ಲ ಎಂದು ಇಎಸ್ಪಿನ್ಗೆ ನೀಡಿರುವ ಸಂದರ್ಶನದಲ್ಲಿ ಮೆಕ್ಡರ್ಮಟ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಯುಎಇಗಿಂತಲೂ ಕಡಿಮೆ ವೆಚ್ಚದಲ್ಲಿ ಐಪಿಎಲ್ ಆಯೋಜಿಸಲು ಆಫರ್ ನೀಡಿದ ದಕ್ಷಿಣ ಆಫ್ರಿಕಾ
ಐಪಿಎಲ್ನಲ್ಲಿ ಒಮ್ಮೆಯಾದರೂ ಕಾಣಿಸಿಕೊಳ್ಳಬೇಕೆಂಬ ಬಯಕೆ ವಿಶ್ವದ ಯಾವುದೇ ದೇಶದ ಕ್ರಿಕೆಟಿಗನಿಗೂ ಇದ್ದೇ ಇರುತ್ತದೆ. ಇಲ್ಲಿ ಆಡಿದರೆ ಕೇವಲ ದುಡ್ಡು ಸಿಗುವುದು ಮಾತ್ರವಲ್ಲದೆ ವಿಶ್ವ ಕ್ರಿಕೆಟ್ನಲ್ಲಿ ಉತ್ತಮ ಗುರುತನ್ನು ಪಡೆಯಲಿದ್ದಾರೆ ಎನ್ನುವುದು ಅತಿಶಯೋಕ್ತಿಯಲ್ಲ. ಈಗಾಗಲೇ ಡೇವಿಡ್ ವಾರ್ನರ್, ಮ್ಯಾಕ್ಸ್ವೆಲ್, ಶಾನ್ ಮಾರ್ಶ್ ಅಂತಹ ಆಟಗಾರರು ಐಪಿಎಲ್ನಲ್ಲಿ ಆಡಿದ ಬಳಿಕ ಹೆಚ್ಚು ಪ್ರಸಿದ್ಧವಾಗಿದ್ದರು.
ಬಿಬಿಎಲ್ನಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಆಡುವ ಮೆಕ್ಡರ್ಮಟ್ 11 ಪಂದ್ಯಗಳಲ್ಲಿ 48ರ ಸರಾಸರಿ ಮತ್ತು 153ರ ಸ್ಟ್ರೈಕ್ರೇಟ್ನಲ್ಲಿ 577 ರನ್ಗಳಿಸಿದ್ದಾರೆ. ಇದೇ ಪ್ರದರ್ಶನ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ದದ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಅಯ್ಕೆ ಮಾಡುವಂತೆ ಮಾಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ