ನವದೆಹಲಿ:ಮಿಲಿಯನ್ ಡಾಲರ್ ಟೂರ್ನಿ ಎಂದೇ ಕರೆಸಿಕೊಳ್ಳುವ ಮತ್ತು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಮೂರು ವರ್ಷಗಳ ನಂತರ ಮತ್ತೆ ಐಪಿಎಲ್ನಲ್ಲಿ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಐಪಿಎಲ್‌ಪ್ರಿಯರಿಗೆ ತಮ್ಮ ನಗರದಲ್ಲಿ ದೊಡ್ಡ ಪರದೆಯ ಮೇಲೆ ಪಂದ್ಯ ನೋಡುವ ಅವಕಾಶ ಮಾಡಿಕೊಡಲಾಗುತ್ತಿದೆ.
3 ವರ್ಷದ ನಂತರ ಮತ್ತೆ ಫ್ಯಾನ್ ಪಾರ್ಕ್:ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2023 ರ ಆವೃತ್ತಿಯು ಮೂರು ವರ್ಷಗಳ ಅಂತರದ ನಂತರ ಐಪಿಎಲ್ ಫ್ಯಾನ್ ಪಾರ್ಕ್ ಮಾಡಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಫ್ಯಾನ್ ಪಾರ್ಕ್‌ಗಳನ್ನು ನಿಲ್ಲಿಸಲಾಗಿತ್ತು. 2019ರ ನಂತರ ಮತ್ತೆ ಫ್ಯಾನ್ ಪಾರ್ಕ್ ಇರಲಿದ್ದು, 20 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 45ಕ್ಕೂ ಹೆಚ್ಚು ನಗರಗಳಲ್ಲಿ ಪಾರ್ಕ್ ಇರಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಷ್ಠಿತ ಐಪಿಎಲ್ ಪಂದ್ಯಾವಳಿಯನ್ನು ದೇಶಾದ್ಯಂತ ಮತ್ತು ಜಗತ್ತಿನಾದ್ಯಂತ ಕೊಂಡೊಯ್ಯುವ ಪ್ರಯತ್ನದಲ್ಲಿ 2015ರ ಆವೃತ್ತಿಯಲ್ಲಿ ಫ್ಯಾನ್ ಪಾರ್ಕ್ ಪರಿಕಲ್ಪನೆ ಪ್ರಾರಂಭಿಸಿತ್ತು. ಟಾಟಾ ಐಪಿಎಲ್ 2023 ಮತ್ತೆ ಅದೇ ಪರಿಕಲ್ಪನೆಯನ್ನು ತರಲಾಗುತ್ತಿದ್ದು, ಹೆಚ್ಚಿನ ನಗರಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಐಪಿಎಲ್ ಫ್ಯಾನ್ ಪಾರ್ಕ್‌ಗಳು ಸೂರತ್, ಮಧುರೈ, ಕೋಟಾ, ಹುಬ್ಬಳ್ಳಿ, ಡೆಹ್ರಾಡೂನ್ ಸೇರಿದಂತೆ 45 ನಗರಗಳಲ್ಲಿ ಮತ್ತು 20ಕ್ಕೂ ಹೆಚ್ಚು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಡಲಾಗುವುದು ಎಂದು ಗುರುವಾರ ಬಿಸಿಸಿಐ ಐಪಿಎಲ್ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಫ್ಯಾನ್ ಪಾರ್ಕ್‌ಗಳು ದೇಶದ ವಿವಿಧ ಪ್ರದೇಶಗಳಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಸಮುದಾಯ ವೀಕ್ಷಣೆಯ ಅತ್ಯಾಕರ್ಷಕ ಮತ್ತು ಮನರಂಜನೆ ಅನುಭವ ನೀಡಲು ಭರವಸೆ ನೀಡುತ್ತವೆ. ಪ್ರತಿ ವಾರಾಂತ್ಯ ಸಂಪೂರ್ಣ ಆವೃತ್ತಿಯವರೆಗೆ ಐದು ಫ್ಯಾನ್ ಪಾರ್ಕ್‌ಗಳು ಇರಲಿವೆ.