ದುಬೈ:ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸಿತು. ಇದೇ ಹರಾಜಿನಲ್ಲಿ ಆಸೀಸ್ ನಾಯಲ ಪ್ಯಾಟ್ ಕಮಿನ್ಸ್ 20.5 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿದ್ದರು ಅವರನ್ನು ಸ್ಟಾರ್ಕ್ ಮೀರಿಸಿದ್ದಾರೆ.
2 ಕೋಟಿ ಮೂಲ ಬೆಲೆಗೆ ಆರಂಭವಾದ ಹರಾಜಿಗೆ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪೈಪೋಟಿಗೆ ಇಳಿದವು. ಈ ಎರಡು ತಂಡಗಳು 10 ಕೋಟಿಯ ಬೆಲೆ ದಾಟಿಸಿದವು. ಇದಾದ ನಂತರ ಬಿಡ್ನ ಕಾವೇರಿಸಿದ್ದು ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್). ಈ ಎರಡೂ ತಂಡಗಳು ಸ್ಟಾರ್ಕ್ಗಾಗಿ ಎಷ್ಟಾದರೂ ಮೊತ್ತವನ್ನು ಕೊಡಲು ಸಿದ್ಧ ಇರುವಂತೆ ಬಿಡ್ ಮಾಡಿದರು. ಉಭಯ ತಂಡಗಳು ಇಂದು ಆರ್ಸಿಬಿ ಮತ್ತು ಎಸ್ಆರ್ಹೆಚ್ ನಿರ್ಮಿಸಿದ್ದ ದಾಖಲೆಯನ್ನು ಮೀರಿ ಬಿಡ್ ಮೊತ್ತ ಕೂಗಿದರು. ಜಿಟಿ 24.75 ಕೋಟಿ ರೂ.ಗೆ ಹಿಂದೆ ಸರಿಯಿತು. ಕೆಕೆಆರ್ ಐಪಿಎಲ್ ಐತಿಹಾಸಿಕ ದಾಖಲೆಯ ಮೊತ್ತಕ್ಕೆ ಸ್ಟಾರ್ಕ್ ಅವರನ್ನು ಖರೀದಿಸಿತು.