ಬೆಂಗಳೂರು:ಇತ್ತೀಚೆಗೆ ಮುಗಿದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನ ತೋರಿದ್ದ ವಿಂಡೀಸ್ ಬೌಲರ್ನನ್ನು ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 6 ಕೋಟಿ ರೂ ನೀಡಿ ಖರೀದಿಸಿದೆ.
ವೇಗದ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳ ಮೂಲಕ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಸ್ಮಿತ್, ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿ ಮತ್ತು ಇತ್ತೀಚಿಗೆ ಭಾರತ ಪ್ರವಾಸದಲ್ಲಿ ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದಿದ್ದರು. ಈ ವಿಂಡೀಸ್ ದೈತ್ಯನ ಖರೀದಿಗಾಗಿ ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಪೈಪೋಟಿ ನಡೆಸಿದವಾದರೂ ಕೊನೆಗೆ ಬಿಡ್ನಲ್ಲಿ ಪಂಜಾಬ್ ಜಯಶಾಲಿಯಾಯಿತು. ಈಗಾಗಲೇ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ರನ್ನು ಕೂಡ ಭಾರಿ ಪೈಪೋಟಿ ನೀಡಿ 11.50 ಕೋಟಿ ರೂಗಳಿಗೆ ಖರೀದಿಸಿದೆ.
25 ವರ್ಷದ ಒಡಿಯನ್ ಸ್ಮಿತ್ 33 ಟಿ20 ಪಂದ್ಯಗಳನ್ನಾಡಿದ್ದು 8.9ರ ಎಕಾನಮಿಯಲ್ಲಿ 36 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿ 124ರ ಸ್ಟ್ರೈಕ್ರೇಟ್ನಲ್ಲಿ 542 ರನ್ಗಳಿಸಿದ್ದಾರೆ.