ಕರ್ನಾಟಕ

karnataka

ETV Bharat / sports

IPLನಲ್ಲಿಂದು ಡೆಲ್ಲಿ-ಪಂಜಾಬ್ ಫೈಟ್​.. ಗೆಲ್ಲುವ ತಂಡ ಆರ್​ಸಿಬಿ ಹಿಂದಿಕ್ಕಿ, 4ನೇ ಸ್ಥಾನಕ್ಕೆ ಲಗ್ಗೆ

ಪ್ಲೇ-ಆಫ್​ ರೇಸ್​​ನಲ್ಲಿ ಜೀವಂತವಾಗಿ ಇರಲು ಇಂದಿನ ಪಂದ್ಯ ಡೆಲ್ಲಿ ಹಾಗೂ ಪಂಜಾಬ್​ಗೆ ಮಹತ್ವವಾಗಿದೆ. ಇಂದು ಗೆಲ್ಲುವ ತಂಡ ನೇರವಾಗಿ 4ನೇ ಸ್ಥಾನಕ್ಕೆ ಲಗ್ಗೆ ಹಾಕಲಿದೆ..

PBKS vs DC
PBKS vs DC

By

Published : May 16, 2022, 5:53 PM IST

ಮುಂಬೈ :ಇಂಡಿಯನ್​ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಪಂಜಾಬ್ ಕಿಂಗ್ಸ್​ ಮುಖಾಮುಖಿಯಾಗಿವೆ. ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇಂದಿನ ಮ್ಯಾಚ್​​ನಲ್ಲಿ ಗೆಲುವು ದಾಖಲಿಸುವ ತಂಡ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಲಿದೆ.

2022ರ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಗುಜರಾತ್​ ಟೈಟನ್ಸ್ ಈಗಾಗಲೇ ಪ್ಲೇ-ಆಫ್​​ಗೆ ಲಗ್ಗೆ ಹಾಕಿದೆ. ಉಳಿದಂತೆ ರಾಜಸ್ಥಾನ ರಾಯಲ್ಸ್​, ಲಖನೌ ತಂಡ ಬಹುತೇಕವಾಗಿ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, 4ನೇ ಸ್ಥಾನಕ್ಕಾಗಿ ಆರ್​​ಸಿಬಿ, ಡೆಲ್ಲಿ ಹಾಗೂ ಪಂಜಾಬ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ:2022 ಕಾಮನ್​ವೆಲ್ತ್​ ಗೇಮ್ಸ್ ​​: ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿ ಇವರಿಗೆಲ್ಲ ಅವಕಾಶ

ಇಂದು ಮುಖಾಮುಖಿಯಾಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್​​ 12 ಪಂದ್ಯಗಳ ಪೈಕಿ 6ರಲ್ಲಿ ಜಯ, 6ರಲ್ಲಿ ಸೋಲು ಕಂಡು 12 ಪಾಯಿಂಟ್​​ಗಳೊಂದಿಗೆ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್​​​ ಕೂಡ ಇಷ್ಟೇ ಪಂದ್ಯಗಳಿಂದ 12 ಪಾಯಿಂಟ್​​ಗಳಿಸಿ, 7ನೇ ಸ್ಥಾನದಲ್ಲಿದೆ. ರನ್​​ರೇಟ್​ ಚೆನ್ನಾಗಿರುವ ಕಾರಣ ಇಂದಿನ ಪಂದ್ಯದಲ್ಲಿ ಜಯ ದಾಖಲಿಸುವ ತಂಡ ನೇರವಾಗಿ 4ನೇ ಸ್ಥಾನಕ್ಕೆ ಜಿಗಿಯಲಿದೆ. ಸೋಲುವ ತಂಡ ಪ್ಲೇ-ಆಫ್​​ ರೇಸ್​ನಿಂದ ಹೊರಬೀಳಲಿದೆ. ಇದರ ಜೊತೆಗೆ ಆರ್​​ಸಿಬಿ 5ನೇ ಸ್ಥಾನಕ್ಕೆ ಕುಸಿತ ಕಾಣಲಿದೆ.

ಐಪಿಎಲ್​​ನಲ್ಲಿ ಉಭಯ ತಂಡಗಳು ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಪಂಜಾಬ್​ 14 ಹಾಗೂ ಡೆಲ್ಲಿ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. 2018ರಿಂದ ಉಭಯ ತಂಡಗಳು 9 ಪಂದ್ಯಗಳಲ್ಲಿ ಎದುರಾಗಿವೆ. ಈ ಪೈಕಿ ಪಂಜಾಬ್ 5ರಲ್ಲಿ ಗೆದ್ದಿದೆ. ಈ ಹಿಂದಿನ ಪಂದ್ಯದಲ್ಲಿ ಪಂಜಾಬ್​ ತಂಡ ಆರ್​ಸಿಬಿ ವಿರುದ್ಧ ಗೆಲುವಿನ ನಗೆ ಬೀರಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ರಾಜಸ್ಥಾನ ರಾಯಲ್ಸ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ.

ಸಂಭವನೀಯ ತಂಡ :

ಪಂಜಾಬ್ ಕಿಂಗ್ಸ್ :ಬೈರ್​ಸ್ಟೋ, ಶಿಖರ್ ಧವನ್, ರಾಜಪಕ್ಸೆ, ಲಿವಿಂಗ್​ಸ್ಟೋನ್, ಮಯಾಂಕ್ ಅಗರವಾಲ್​(ಕ್ಯಾಪ್ಟನ್), ಜಿತೇಶ್ ಶರ್ಮಾ(ವಿ,ಕೀ), ಹರ್ಮಪ್ರಿತ್ ಬ್ರಾರ್, ರಿಷಿ ಧವನ್, ಕಾಗಿಸೋ ರಬಾಡಾ, ರಾಹುಲ್ ಚಹರ್, ಅರ್ಷದೀಪ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್ :ಮನ್​ದೀಪ್ ಸಿಂಗ್/ಶ್ರೀಕಾರ್ ಭರತ್, ಡೇವಿಡ್​​ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ಕ್ಯಾಪ್ಟನ್​, ವಿ,ಕೀ), ಲಲಿತ್ ಯಾದವ್​, ರೊಮನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಸಿಂಗ್, ಖಲೀಲ್ ಅಹ್ಮದ್, ನೊರ್ಟ್ಜೆ.

ABOUT THE AUTHOR

...view details