ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಪಂಜಾಬ್ 11 ರನ್ಗಳ ರೋಚಕ ಗೆಲುವು ದಾಖಲು ಮಾಡಿದ್ದು, ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಯಾಂಕ್ ಬಳಗ ಶಿಖರ್ ಧವನ್(88) ಅರ್ಧಶತಕ ಮತ್ತು ರಾಜಪಕ್ಷ ಅವರ 42 ರನ್ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 187 ರನ್ಗಳಿಸಿತು.
188ರನ್ಗಳ ಗುರಿ ಬೆನ್ನತ್ತಿದ ಜಡೇಜಾ ನೇತೃತ್ವದ ಸಿಎಸ್ಕೆ ತಂಡ ಅಂಬಾಟಿ ರಾಯುಡು(78) ಸ್ಫೋಟಕ ರನ್ಗಳ ಹೊರತಾಗಿ ಕೂಡ 20 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 176ರನ್ಗಳಿಸಿ, 11 ರನ್ಗಳ ಸೋಲು ಕಂಡಿದೆ.
ಪಂಜಾಬ್ ಇನ್ನಿಂಗ್ಸ್: ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಪಂಜಾಬ್ ಕಿಂಗ್ಸ್ ಧವನ್ ಮತ್ತು ಅಗರ್ವಾಲ್ ಮೊದಲ ವಿಕೆಟ್ಗೆ 37 ರನ್ಗಳ ಜೊತೆಯಾಟ ನೀಡಿದರು. ಆದರೆ ನಾಯಕ ಧವನ್ 18 ರನ್ಗಳಿಸಿ ಪವರ್ ಪ್ಲೇನ ಕೊನೆಯ ಓವರ್ನಲ್ಲಿ ತೀಕ್ಷಣಗೆ ವಿಕೆಟ್ ಒಪ್ಪಿಸಿದರು. ನಂತರ 2ನೇ ವಿಕೆಟ್ಗೆ ಒಂದಾದ ಧವನ್ ಮತ್ತು ರಾಜಪಕ್ಷ 110 ರನ್ಗಳ ಭರ್ಜರಿ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ರಾಜಪಕ್ಷ 32 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 42 ರನ್ಗಳಿಸಿ ಔಟಾದರು. ನಂತರ ಬಂದ ಲಿವಿಂಗ್ಸ್ಟೋನ್ ಕೇವಲ 7 ಎಸೆತಗಳಲ್ಲಿ 19 ರನ್ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಆರಂಭಿಕನಾಗಿ ಕಣಕ್ಕಿಳಿದು ಕೊನೆಯ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಶಿಖರ್ ಧವನ್ 59 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 88 ರನ್ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ 42ಕ್ಕೆ 2 ಮತ್ತು ತೀಕ್ಷಣ 32ಕ್ಕೆ 1 ವಿಕೆಟ್ ಪಡೆದರು.