ಕರ್ನಾಟಕ

karnataka

ETV Bharat / sports

1 ಲಕ್ಷ ಅಭಿಮಾನಿಗಳು ಹಾಜರ್​: ಗಿನ್ನೆಸ್​ ದಾಖಲೆ ಬರೆದ ನರೇಂದ್ರ ಮೋದಿ ಕ್ರೀಡಾಂಗಣ

ವಿಶ್ವದಲ್ಲಿಯೇ ಅತಿದೊಡ್ಡ ಕ್ರೀಡಾಂಗಣವೆಂದು ಗುರುತಿಸಿಕೊಂಡಿರುವ ಗುಜರಾತ್​ನ ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಅಭಿಮಾನಿಗಳ ಹಾಜರಾತಿಯಿಂದ ವಿಶ್ವದಾಖಲೆ ಪುಟ ಸೇರಿದೆ.

guinness-world-record-for-attendance
ಗಿನ್ನೆಸ್​ ದಾಖಲೆ ಬರೆದ ನರೇಂದ್ರ ಮೋದಿ ಕ್ರೀಡಾಂಗಣ

By

Published : Nov 27, 2022, 5:54 PM IST

Updated : Nov 27, 2022, 6:33 PM IST

ನವದೆಹಲಿ:ವಿಶ್ವದಲ್ಲಿಯೇ ಅತಿದೊಡ್ಡ ಕ್ರೀಡಾಂಗಣವೆಂದು ಗುರುತಿಸಿಕೊಂಡಿರುವ ಗುಜರಾತ್​ನ ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಅಭಿಮಾನಿಗಳ ಹಾಜರಾತಿಯಿಂದ ವಿಶ್ವದಾಖಲೆ ಪುಟ ಸೇರಿದೆ. 2022ರ ಇಂಡಿಯನ್​ ಪ್ರೀಮಿಯರ್​ ಲೀಗ್​ನ(ಐಪಿಎಲ್​) ಫೈನಲ್​ ಪಂದ್ಯದಲ್ಲಿ ಅತಿಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಹಾಜರಾಗಿದ್ದು, ಇದು ಗಿನ್ನೆಸ್​ ದಾಖಲೆಯಾಗಿದೆ.

ಮೇ 29 ರಂದು ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯ ನೋಡಲು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ 101,566 ಮಂದಿ ಹಾಜರಾಗಿದ್ದರು. ಇದು ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಹಾಜರಾದ ಅತಿ ದೊಡ್ಡ ಅಭಿಮಾನಿಗಳ ಸಂಖ್ಯೆಯಾಗಿದೆ.

ವಿಶ್ವದಾಖಲೆಗೆ ಸೇರಿದ ಮಾಹಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕಾರ್ಯದರ್ಶಿ ಜಯ್​ ಶಾ ಅವರು ಪುರಸ್ಕಾರದ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.

ಭಾರತ ಗಿನ್ನೆಸ್ ವಿಶ್ವದಾಖಲೆಯನ್ನು ಬರೆದಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ಇದು ದೇಶದ ಎಲ್ಲಾ ಅಭಿಮಾನಿಗಳ ಬೆಂಬಲ ಉತ್ಸಾಹದಿಂದ ಸಾಧ್ಯವಾಗಿದೆ. ಅಭಿನಂದನೆಗಳು ಎಂದು ಬರೆದುಕೊಂಡಿದೆ.

ಓದಿ:IND vs NZ: ಹ್ಯಾಮಿಲ್ಟನ್‌ ಏಕದಿನ ಪಂದ್ಯ ಮಳೆಗೆ ಆಹುತಿ

Last Updated : Nov 27, 2022, 6:33 PM IST

ABOUT THE AUTHOR

...view details