ಕರ್ನಾಟಕ

karnataka

ETV Bharat / sports

ಎಬಿಡಿ ಸೇರಿದಂತೆ ಸುರಕ್ಷಿತವಾಗಿ ತವರು ಸೇರಿದ ದಕ್ಷಿಣ ಆಫ್ರಿಕಾದ 11 ಕ್ರಿಕೆಟಿಗರು

ಆಸ್ಟ್ರೇಲಿಯಾ ಆಟಗಾರರು ಮಾಲ್ಡೀವ್ಸ್​ ಸೇರಿಕೊಂಡಿದ್ದು, ಆಸ್ಟ್ರೇಲಿಯಾ ಗಡಿ ತೆರೆಯುವವರೆಗೆ ಅಲ್ಲಿಯೇ ಇರಲಿದ್ದಾರೆ. ಕೀವೀಸ್ ಆಟಗಾರರು ವಿಶೇಷ ಚಾರ್ಟರ್ ವಿಮಾನದಲ್ಲಿ ಆಕ್ಲೆಂಡ್​ಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾ ಆಟಗಾರರು ಮುಂಬೈ ಮತ್ತು ದೋಹಾ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಎಸ್​ಒಪಿಯೊಂದಿಗೆ ಜೋಹನ್ಸ್​ಬರ್ಗ್ಸ್​ಗೆ ತಲುಪಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

By

Published : May 6, 2021, 7:07 PM IST

ಅಹ್ಮದಾಬಾದ್​: 14ನೇ ಆವೃತ್ತಿಯ ಐಪಿಎಲ್ ರದ್ದಾಗುತ್ತಿದ್ದಂತೆ ಎಲ್ಲ ಆಟಗಾರರು ತವರಿನತ್ತ ಪಯಣ ಬೆಳೆಸಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಖಚಿತಪಡಿಸಿದೆ.

" ನಮ್ಮ ಎಲ್ಲ ಸಿಬ್ಬಂದಿಯನ್ನು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಿಸಿಸಿಐ ಮತ್ತು ಆಯಾ ಕ್ರಿಕೆಟ್ ಮಂಡಳಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.ಆ ದೇಶದ ಕೇಂದ್ರಸ್ಥಾನಗಳಿಂದ ಅವರವರ ನಗರಗಳಿಗೆ ಸಾಗುತ್ತಿರುವ ಕ್ರಿಕೆಟಿಗರು ನಾವು ನೀಡಿರುವ ಕಠಿಣ ಎಸ್​ಒಪಿಗಳನ್ನು ಪಾಲಿಸಬೇಕಾಗಿದೆ. ಅವರು ಮನೆ ತಲುಪುವವರೆಗೂ ನಾವು ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ" ಎಂದು ಆರ್​ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶಿ ಆಟಗಾರರನ್ನು ಕೂಡ ಬಿಸಿಸಿಐ ಮಾರ್ಗದರ್ಶನದಲ್ಲಿ ಚಾರ್ಟೆಡ್ ಫ್ಲೈಟ್ ಮೂಲಕ ಕಳುಹಿಸಿಕೊಡಲು ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

ಆಸ್ಟ್ರೇಲಿಯಾ ಆಟಗಾರರು ಮಾಲ್ಡೀವ್ಸ್​ಗೆ ಸೇರಿಕೊಂಡಿದ್ದು, ಆಸ್ಟ್ರೇಲಿಯಾ ಗಡಿ ತೆರೆಯುವವರೆಗೆ ಅಲ್ಲಿಯೇ ಇರಲಿದ್ದಾರೆ. ಕಿವೀಸ್ ಆಟಗಾರರು ವಿಶೇಷ ಚಾರ್ಟರ್ ವಿಮಾನದಲ್ಲಿ ಆಕ್ಲೆಂಡ್​​ಗೆ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾ ಆಟಗಾರರು ಮುಂಬೈ ಮತ್ತು ದೋಹಾ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಎಸ್​ಒಪಿಯೊಂದಿಗೆ ಜೋಹನ್ಸ್​ಬರ್ಗ್ಸ್​ಗೆ ತಲುಪಿದ್ದಾರೆ.

ಇದನ್ನು ಓದಿ:ಮೈಕ್​ ಹಸ್ಸಿ ಬಿಟ್ಟು ಮಾಲ್ಡೀವ್ಸ್​ ತಲುಪಿದ ಎಲ್ಲ ಆಸ್ಟ್ರೇಲಿಯಾ ಆಟಗಾರರು.. ಬಿಸಿಸಿಐಗೆ ಧನ್ಯವಾದ ತಿಳಿಸಿದ ಸಿಎ

ABOUT THE AUTHOR

...view details