ಕರ್ನಾಟಕ

karnataka

ETV Bharat / sports

ರಾಜಸ್ಥಾನ್ ಅದ್ಭುತ ಬೌಲಿಂಗ್ ದಾಳಿ : ರಾಯಲ್ಸ್‌ಗೆ 155 ರನ್​ಗಳ ಸಾಧಾರಣ ಗುರಿ ನೀಡಿದ ಡೆಲ್ಲಿ - ಹೆಟ್ಮಾಯಿರ್

ಕೇವಲ21ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕ ಪಂತ್ ಮತ್ತು ಮಾಜಿ ನಾಯಕ ಅಯ್ಯರ್​ 3ನೇ ವಿಕೆಟ್​ ಜೊತೆಯಾಟದಲ್ಲಿ 62 ರನ್​ ಸೇರಿಸಿ ಇನ್ನಿಂಗ್ಸ್​ಗೆ ಜೀವ ತುಂಬಿದರು. ಪಂತ್​ 24 ಎಸೆತಗಳಲ್ಲಿ 24 ರನ್ಗಳಿಸಿದ್ದ ವೇಳೆ ಮುಸ್ತಫಿಜುರ್​ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಅದರು..

Rajasthan Royal vs Delhi capitals
ಆರಂಭಿಕ ಬ್ಯಾಟರ್​​ಗಳಾದ ಪೃಥ್ವಿ ಶಾ(10) ಮತ್ತು ಶಿಖರ್ ಧವನ್​(8) ಪವರ್​ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್​ ಸೇರಿಕೊಂಡರು. ಶಾ ಸಕಾರಿಯಾಗೆ ವಿಕೆಟ್ ಒಪ್ಪಿಸಿದರೆ, ಧವನ್​ ದುರಾದೃಷ್ಟ ರೀತಿಯಲ್ಲಿ ಕಾರ್ತಿಕ್​ ತ್ಯಾಗಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

By

Published : Sep 25, 2021, 5:36 PM IST

ಅಬುಧಾಬಿ :ಮುಸ್ತಫಿಜುರ್ ರಹಮಾನ್​ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ​ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಜಸ್ಥಾನ್​ ರಾಯಲ್ಸ್​ ಕೇವಲ 154 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.

ಅಬುಧಾಬಿ ಶೇಖ್​ ಜಾಯೇದ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 36ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಪಂತ್​ ಪಡೆ, ಆರಂಭದಿಂದಲೂ ರನ್​ಗಳಿಸಲು ಪರದಾಡಿ ರಾಯಲ್ಸ್​ಗೆ 155 ರನ್​ಗಳ ಸಾಧಾರಣ ಗುರಿ ನೀಡಿತು.

ಆರಂಭಿಕ ಬ್ಯಾಟರ್​​ಗಳಾದ ಪೃಥ್ವಿ ಶಾ(10) ಮತ್ತು ಶಿಖರ್ ಧವನ್​(8) ಪವರ್​ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್​ ಸೇರಿಕೊಂಡರು. ಶಾ ಸಕಾರಿಯಾಗೆ ವಿಕೆಟ್ ಒಪ್ಪಿಸಿದರೆ, ಧವನ್​ ದುರಾದೃಷ್ಟ ರೀತಿಯಲ್ಲಿ ಕಾರ್ತಿಕ್​ ತ್ಯಾಗಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

62 ರನ್​ಗಳ ಜೊತೆಯಾಟ :ಕೇವಲ21ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕ ಪಂತ್ ಮತ್ತು ಮಾಜಿ ನಾಯಕ ಅಯ್ಯರ್​ 3ನೇ ವಿಕೆಟ್​ ಜೊತೆಯಾಟದಲ್ಲಿ 62 ರನ್​ ಸೇರಿಸಿ ಇನ್ನಿಂಗ್ಸ್​ಗೆ ಜೀವ ತುಂಬಿದರು. ಪಂತ್​ 24 ಎಸೆತಗಳಲ್ಲಿ 24 ರನ್ಗಳಿಸಿದ್ದ ವೇಳೆ ಮುಸ್ತಫಿಜುರ್​ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಅದರು.

ಕೇವಲ 6 ರನ್​ಗಳ ಅಂತರದಲ್ಲಿ 32 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್​ಗಳ ಸಹಿತ 43 ರನ್​ಗಳಿಸಿದ್ದ ಅಯ್ಯರ್​, ತೆವಾಟಿಯಾ ಬೌಲಿಂಗ್​ನಲ್ಲಿ ಸ್ಟಂಪ್​ ಬಲೆಗೆ ಬಿದ್ದರು. ವಿಕೆಟ್​ ಬೀಳುತ್ತಿದ್ದರೂ ಸ್ಕೋರ್​ಗತಿಯನ್ನು ಹೆಚ್ಚಿಸುವುದಕ್ಕೆ ಮುಂದಾದ ಹೆಟ್ಮಾಯಿರ್​ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 28 ರನ್​ಗಳಿಸಿ ಮುಸ್ತಫಿಜುರ್​ಗೆ 2ನೇ ಬಲಿಯಾದರು.

ಅಕ್ಷರ್​ ಪಟೇಲ್ 12, ಲಲಿತ್ ಯಾದವ್​ 14 ರನ್​ಗಳಿಸಿದರು. ರಾಜಸ್ಥಾನ್​ ರಾಯಲ್ಸ್ ಪರ ಚೇತನ್​ ಸಕಾರಿಯಾ 33ಕ್ಕೆ 2, ಮುಸ್ತಫಿಜುರ್ ರಹಮಾನ್​ 22ಕ್ಕೆ2, ರಾಹುಲ್ ತೆವಾಟಿಯಾ 17ಕ್ಕೆ 1 ಮತ್ತು ಕಾರ್ತಿಕ್ ತ್ಯಾಗಿ 40ಕ್ಕೆ 1 ವಿಕೆಟ್ ಪಡೆದರು.

ಇದನ್ನು ಓದಿ:ಆರ್​ಸಿಬಿ ವಿರುದ್ಧದ ಗೆಲುವಿನ ಶ್ರೇಯ ಬೌಲರ್​ಗಳಿಗೆ ಸಲ್ಲಬೇಕು : ಧೋನಿ

ABOUT THE AUTHOR

...view details