ಕರ್ನಾಟಕ

karnataka

ETV Bharat / sports

ಬ್ರಾವೋ-ಹೆಜಲ್​ವುಡ್​ ಮಾರಕ ಬೌಲಿಂಗ್ ದಾಳಿ: ಚೆನ್ನೈಗೆ 135 ರನ್​ಗಳ ಸಾಧಾರಣ ಗುರಿ ನೀಡಿದ SRH - ಡ್ವೇನ್ ಬ್ರಾವೋ

ಹೆಜಲ್​ವುಡ್​ (24ಕ್ಕೆ3) ಡ್ವೇನ್ ಬ್ರಾವೋ (17ಕ್ಕೆ2) ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಸನ್​ರೈಸರ್ಸ್​ ಹೈದರಾಬಾದ್ ತಂಡ ಕೇವಲ 134 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

Chennai vs Hyderabad
Chennai vs Hyderabad

By

Published : Sep 30, 2021, 9:22 PM IST

ಶಾರ್ಜಾ:ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್​ರೈಸರ್ಸ್ ಹೈದರಾಬಾದ್ ತಂಡ ಕೇವಲ 135 ರನ್​ಗಳ ಸಾಧಾರಣ ಗುರಿ ನೀಡಿದೆ.​

ಶಾರ್ಜಾ ಮೈದಾನದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಇಳಿದ ಸನ್​ರೈಸರ್ಸ್ ಹೈದರಾಬಾದ್​ ತಂಡ ಆರಂಭದಿಂದಲೂ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ವೃದ್ಧಿಮಾನ್​ ಸಹಾ ಹೊರೆತುಪಡಿಸಿ, ಉಳಿದೆಲ್ಲಾ ಬ್ಯಾಟರ್​ಗಳು ಬೇಜವಾಬ್ದಾರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು.

ಕಳೆದ ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಜೇಸನ್​ ರಾಯ್ ಇಂದು ಕೇವಲ 2 ರನ್​ಗಳಿಸಿ ಹೆಜಲ್​ವುಡ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ವಿಲಿಯಮ್ಸನ್​ ಆಟ ಇಂದು 11ರನ್​ಗಳಿಗೆ ಸೀಮಿತವಾಯಿತು. ಯುವ ಬ್ಯಾಟರ್​ಗಳಾದ ಪ್ರಿಯಂ ಗರ್ಗ್​(7), ಅಭಿಷೇಕ್ ಶರ್ಮಾ(18), ಅಬ್ದುಲ್ ಸಮದ್​(18) ಮತ್ತು ಜೇಸನ್ ಹೋಲ್ಡರ್​(5) ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್​ ಕೈಚೆಲ್ಲಿದರು. ರಶೀದ್ ಖಾನ್ ಅಜೇಯ 17 ರನ್​ಗಳಿಸಿ ಅಜೇಯರಾಗುಳಿದರು. ಸಹಾ 46 ಎಸೆತಗಳಲ್ಲಿ 43 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಜೋಶ್ ಹೆಜಲ್​ವುಡ್​ 24ಕ್ಕೆ3, ಡ್ವೇನ್ ಬ್ರಾವೋ 17ಕ್ಕೆ2, ಜಡೇಜಾ 14ಕ್ಕೆ1 ಮತ್ತು ಶಾರ್ದೂಲ್ ಠಾಕೂರ್​ 37ಕ್ಕೆ1 ವಿಕೆಟ್ ಪಡೆದು ಹೈದರಾಬಾದ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ABOUT THE AUTHOR

...view details