ಕರ್ನಾಟಕ

karnataka

ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ: ಮುತ್ತಯ್ಯ ಮುರಳೀಧರನ್

By

Published : Oct 19, 2020, 8:12 AM IST

ಫರ್ಗ್ಯುಸನ್‌ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದೇ ನಮಗೆ ಸಮಸ್ಯೆಯಾಗಿದ್ದು ಎಂದು ಸನ್ ​ರೈಸರ್ಸ್​ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

Muttiah Muralitharan
ಮುತ್ತಯ್ಯ ಮುರಳೀಧರನ್

ಅಬುಧಾಬಿ: ಕೆಕೆಆರ್​ ವಿರುದ್ಧ ನಮ್ಮ ತಂಡ ನಿಜವಾಗಿಯೂ ಶ್ರಮಿಸಿದೆ. ಆದರೆ ಕೋಲ್ಕತ್ತಾ ನೈಟ್​ ರೈಟರ್ಸ್​ ತಂಡವನ್ನು ಮೀರಿಸಲು ಸಾಧ್ಯವಾಗಲಿಲ್ಲ ಎಂದು ಸನ್​ ರೈಸರ್ಸ್ ಹೈದರಾಬಾದ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯ ಟೈ ಆದ ನಂತರ ನಡೆದ ರೋಮಾಂಚಕ ಸೂಪರ್ ಓವರ್ ಮುಖಾಮುಖಿಯಲ್ಲಿ ಕೆಕೆಆರ್​ ತಂಡ ಡೇವಿಡ್ ವಾರ್ನರ್ ನಾಯಕತ್ವದ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಮುತ್ತಯ್ಯ ಮುರಳೀಧರನ್, ಕೇನ್​ ವಿಲಿಯಮ್ಸನ್​ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದಕ್ಕೆ ಕಾರಣ ತಿಳಿಸಿದ್ರು. "ಗಾಯದ ಕಾರಣದಿಂದ ವಿಲಿಯಮ್ಸನ್​ಗೆ ಒಂದು, ಎರಡು ರನ್ ಓಡಲು ಸಾಧ್ಯವಿರಲಿಲ್ಲ. ಹೀಗಾಗಿ ಆರಂಭಿಕನಾಗಿ ಬಂದ್ರು. ಆವರು ತಮ್ಮ ಜವಾಬ್ದಾರಿ ನಿರ್ವಹಿಸಿದ್ರು. ಆದರೆ ಪಂದ್ಯ ಟೈ ಆಯಿತು. ಟಿ-20 ಕ್ರಿಕೆಟ್‌ನಲ್ಲಿ ಇವು ಸಾಮಾನ್ಯ. ನಾವು ಕಷ್ಟಪಟ್ಟು ಪ್ರಯತ್ನಿಸಿದ್ದೇವೆ. ಆದರೆ ಏನು ಕೂಡ ನಾವಂದುಕೊಂಡಂತೆ ನಡೆಯಲಿಲ್ಲ" ಎಂದಿದ್ದಾರೆ.

"ಪಿಚ್ ಏನೂ ವ್ಯತ್ಯಾಸ ಮಾಡಿಲ್ಲ. ಇದು ಕೇವಲ 40 ಓವರ್​ಗಳ ಪಂದ್ಯವಾದ್ದರಿಂದ ಒಂದೇ ರೀತಿಯಲ್ಲಿರುತ್ತದೆ. ಆದರೆ ತಂಡಗಳ ಮೇಲಿನ ಒತ್ತಡದ ಮಟ್ಟಗಳು ವಿಭಿನ್ನವಾಗಿವೆ. ಏಕೆಂದರೆ ಚೇಸಿಂಗ್ ತುಂಬಾ ಕಷ್ಟಕರವಾಗಿರುತ್ತದೆ. ನಾವು ಪವರ್ ‌ಪ್ಲೇನಲ್ಲಿ ಉತ್ತಮವಾಗಿ ಸಾಗುತ್ತಿದ್ದೆವು. ಆದರೆ 15 ರನ್‌ಗಳ ಅಂತರದಲ್ಲಿ ಮೂರ್ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡೆವು. ಫರ್ಗ್ಯುಸನ್‌ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದೇ ನಮಗೆ ಸಮಸ್ಯೆಯಾಗಿದ್ದು. ಆದರೆ ನಾವು ಕಂಬ್ಯಾಕ್ ಮಾಡಿದ್ರು. ಪಂದ್ಯದ ಕೊನೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ" ಎಂದಿದ್ದಾರೆ.

164 ರನ್​ಗಳ ಗುರಿ ಪಡೆದಿದ್ದ ಸನ್ ‌ರೈಸರ್ಸ್​ ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್​ ಗಳಿಸುವ ಮೂಲಕ ಟೈ ಸಾಧಿಸಿತು. ಆದರೆ ಹೈದರಾಬಾದ್​ ತಂಡ ಫರ್ಗ್ಯುಸನ್​ ಎಸೆದ ಸೂಪರ್ ಓವರ್​ನಲ್ಲಿ ಕೇವಲ 3 ಎಸೆತಗಳಲ್ಲಿ 2 ರನ್​ ಗಳಿಸಿ 2 ವಿಕೆಟ್ ಕಳೆದುಕೊಂಡಿತು. 3 ರನ್​ಗಳ ಗುರಿಯನ್ನು ಕೆಕೆಆರ್​ 4 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.

ABOUT THE AUTHOR

...view details