ದುಬೈ:ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಅವಕಾಶ ಪಡೆದಿದ್ದಾರೆ. ಆಶ್ಚರ್ಯಕರ ಸಂಗತಿ ಅಂದರೆ ಪಂಜಾಬ್ನ ಯಾವುದೇ ಆಟಗಾರರು ಈ ತಂಡದಲ್ಲಿ ಅವಕಾಶ ಪಡೆದಿಲ್ಲ.
ಕೆಎಲ್ ರಾಹುಲ್ -ಮಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್ ನಾಯಕನಾಗಿ ಪದಾರ್ಪಣೆ ಮಾಡಿರುವ ಪಂದ್ಯದಲ್ಲಿ ಕರ್ನಾಟಕ ಸ್ಟಾರ್ ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಹಾಗೂ ಕೃಷ್ಣಪ್ಪ ಗೌತಮ್ ಇಂದಿನ ಪಂದ್ಯದಲ್ಲಿ ಪಂಜಾಬ್ ಭಾಗವಾಗಿದ್ದಾರೆ.
ವಿಶೇಷವೆಂದರೆ ತಂಡದಲ್ಲಿ ಮೂವರು ಪಂಜಾಬ್ ತಂಡದ ಆಟಗಾರರಿದ್ದರೂ ಈ ಪಂದ್ಯದಲ್ಲಿ ಅವಕಾಶ ಪಡೆದಿಲ್ಲ. ನಾಲ್ವರು ಆಟಗಾರರು ವಿದೇಶಿಗರಾಗಿದ್ರೆ, ಉಳಿದ ಮೂವರಾದ ಮೊಹ್ಮದ್ ಶಮಿ (ಪಶ್ಚಿಮ ಬಂಗಾಳ), ರವಿ ಬಿಷ್ಣೋಯ್(ರಾಜಸ್ಥಾನ್) ಹಾಗೂ ಸರ್ಫರಾಜ್ ಖಾನ್(ಮುಂಬೈ) ಮೂಲದವರಾಗಿದ್ದಾರೆ.
ತಂಡದ ಅನುಭವಿ ಬ್ಯಾಟ್ಸ್ಮನ್ ಮಂದೀಪ್ ಸಿಂಗ್ರನ್ನು ಕಡೆಗಣಿಸಿ ಸರ್ಫರಾಜ್ ಖಾನ್ ಹಾಗೂ ಕರುಣ್ ನಾಯರ್ಗೆ ಅವಕಾಶ ನೀಡಿರುವುದಕ್ಕೆ ಕೆಲ ಪಂಜಾಬ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.