ಕರ್ನಾಟಕ

karnataka

ETV Bharat / sports

ಪ್ಲೇ ಆಫ್​​​​​ಗೇರುವುದಕ್ಕೆ ಯಾಕೆ ಸಾಧ್ಯವಾಗಲಿಲ್ಲ... ಕಾರಣ ಹೇಳ್ತಾರೆ ಕೇಳಿ ಅಶ್ವಿನ್​​​

ಹರಾಜಿನಲ್ಲಿ ಕೆಲ ಉತ್ತಮ ಆಟಗಾರರನ್ನೇ ಆಯ್ಕೆ ಮಾಡಿಕೊಂಡಿದ್ದೆವು. ಆದರೆ, ಅವರೆಲ್ಲ ತಂಡಕ್ಕೆ ಅಲಭ್ಯರಾಗಿದ್ದರಿಂದ ನಾವು ಪ್ಲೇ ಆಫ್ಸ್​ಗೆ ಎಂಟ್ರಿ ಪಡೆಯುವಲ್ಲಿ ವಿಫಲರಾದೆವು ಎಂದು ಕಿಂಗ್ಸ್​​ ಇಲೆವನ್​ ಪಂಜಾಬ್​ ನಾಯಕ ಅಶ್ವಿನ್​ ಹೇಳಿದ್ದಾರೆ.

ಕಿಂಗ್ಸ್​​ ಇಲೆವನ್​ ಪಂಜಾಬ್​ ತಂಡ (ಕೃಪೆ: ಟ್ವಿಟ್ಟರ್​)

By

Published : May 4, 2019, 12:20 PM IST

ಚಂಡೀಗಢ:ಪ್ರಮುಖ ಆಟಗಾರರು ಗಾಯಗೊಂಡಿದ್ದು, ವಿದೇಶಿ ಮೂಲದ ವೇಗದ ಬೌಲರ್​ಗಳು ಪರಿಣಾಮಕಾರಿಯಾಗದ ಕಾರಣ ನಾವು ಕೆಲ ಪಂದ್ಯಗಳನ್ನ ಸೋಲಬೇಕಾಯಿತು. ಮತ್ತು ನಮ್ಮ ತಂಡ ಪವರ್​ ಪ್ಲೇ ಓವರ್​ಗಳನ್ನ ಸರಿಯಾಗಿ ಬಳಿಸಿಕೊಳ್ಳಲು ವಿಫಲವಾಗಿದ್ದೇ ತಂಡ ಪ್ಲೇ ಆಫ್ಸ್​ಗೆ ಎಂಟ್ರಿ ಪಡೆಯುವಲ್ಲಿ ವಿಫಲವಾಗಿದೆ ಎಂದು ಕಿಂಗ್ಸ್​​ ಇಲೆವನ್​ ಪಂಜಾಬ್​ ನಾಯಕ ಅಶ್ವಿನ್​ ಹೇಳಿದ್ದಾರೆ.

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೋಲಿನ ಬಳಿಕ ಮಾತನಾಡಿದ ಅವರು, ವರುಣ್​ ಚಕ್ರವರ್ತಿ(ಕೈ ಬೆರಳು), ಮುಜೀಬ್​ ಉರ್​ ರೆಹಮಾನ್(ಭುಜದ ನೋವು) ಗಾಯದಿಂದಾಗಿ ತಂಡಕ್ಕೆ ಅಲಭ್ಯರಾದರು. ಇನ್ನು ನಾವು ಪವರ್​ ಪ್ಲೇ ಅನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ವಿಫಲವಾಗಿದ್ದೇ ತಂಡ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕಾರಣ ಕೊಟ್ಟರು. ನಮ್ಮ ಎದುರಿಗೆ ಹಲವು ಸವಾಲುಗಳಿದ್ದವು. ಹೀಗಾಗಿ ನಾವು ಹರಾಜಿನಲ್ಲಿ ಕೆಲ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದೆವು. ಆದರೆ ಅವರೆಲ್ಲ ಗಾಯಗೊಂಡರು. ಇದು ತಂಡದ ಮೇಲೆ ಪರಿಣಾಮ ಬೀರಿತು ಎಂದು ಅಶ್ವಿನ್​ ತಂಡದ ಸೋಲಿಗೆ ಕಾರಣಗಳನ್ನ ಹೇಳಿದರು. ​

ABOUT THE AUTHOR

...view details