ಕೊಲಂಬೊ :ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಅವರಿಗೆ ಗುರುವಾರ ಕೊರೊನಾ ದೃಢಪಟ್ಟಿದೆ. ಸದ್ಯ ಮುಂಬರುವ ಭಾರತದ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಲಂಕಾ ತಂಡ ಭಾಗಿಯಾಗುವ ಹಿನ್ನೆಲೆ ಭೀತಿ ಮೂಡಿಸಿದೆ. ಇಂಗ್ಲೆಂಡ್ ಸರಣಿಯಿಂದ ಮರಳಿದ 48 ಗಂಟೆಗಳ ಬಳಿಕ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು.
ಜುಲೈ 13ರಿಂದ ಪ್ರಾರಂಭವಾಗುವ ಆರು ಪಂದ್ಯಗಳ ವೈಟ್-ಬಾಲ್ ಕ್ರಿಕೆಟ್ ಸರಣಿಯಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸಲು ಸಜ್ಜಾಗಿದೆ. ಫ್ಲವರ್ಗೆ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಅವರು ತಂಡದಿಂದ ದೂರವುಳಿದು ಪ್ರತ್ಯೇಕ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ಗೆ ಕೋವಿಡ್ ತಗುಲಿರುವುದನ್ನು ಶ್ರೀಲಂಕಾ ಕ್ರಿಕೆಟ್ (SLC) ಖಚಿತಪಡಿಸಿದೆ.
ಇದನ್ನೂ ಓದಿ:"ಕನ್ನಡ್ ಅಲ್ಲ, ಕನ್ನಡ..." ಮಹಾರಾಷ್ಟ್ರ ಕ್ರಿಕೆಟಿಗನಿಗೆ ಕನ್ನಡ ಮೇಷ್ಟ್ರಾದ ಕೆ.ಗೌತಮ್- ವಿಡಿಯೋ ನೋಡಿ..