ಕರ್ನಾಟಕ

karnataka

ETV Bharat / sports

ಭಾರತದ ಹೆಸರಲ್ಲೇ ಎರಡು ಕ್ರಿಕೆಟ್​ ತಂಡ: ಒಂದು ಇಂಗ್ಲೆಂಡ್​ನಲ್ಲಿ, ಮತ್ತೊಂದು ಶ್ರೀಲಂಕಾದಲ್ಲಿ! - ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿ

ಈಗಾಗಲೇ ನಿಗದಿಯಾಗಿರುವಂತೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ ಜೂನ್​ ಮೊದಲ ವಾರದಲ್ಲಿ ಇಂಗ್ಲೆಂಡ್​ಗೆ ಪ್ರಯಾಣ ಬೆಳಸಲಿದೆ. ಅಲ್ಲಿ ಜೂನ್, ಜುಲೈ , ಆಗಸ್ಟ್​ ಮತ್ತು ಸೆಪ್ಟೆಂಬರ್​ ತಿಂಗಳವರೆಗೂ ಇರಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ.

ಭಾರತ ಕ್ರಿಕೆಟ್ ತಂಡ
ಭಾರತ ಕ್ರಿಕೆಟ್ ತಂಡ

By

Published : May 9, 2021, 10:56 PM IST

ಮುಂಬೈ: ವಿರಾಟ್​ ಕೊಹ್ಲಿ ನೇತೃತ್ವದ ಟಾಪ್​ ಆಟಗಾರರನ್ನೊಳಗೊಂಡ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಾಗಲೇ ಮತ್ತೊಂದು ವೈಟ್​ಬಾಲ್ ಸ್ಪೆಷಲಿಸ್ಟ್​ಗಳ ತಂಡ ದ್ವಿಪಕ್ಷೀಯ ಸರಣಿಯನ್ನಾಡಲು ಜುಲೈನಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಈಗಾಗಲೇ ನಿಗದಿಯಾಗಿರುವಂತೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ ಜೂನ್​ ಮೊದಲ ವಾರದಲ್ಲಿ ಇಂಗ್ಲೆಂಡ್​ಗೆ ಪ್ರಯಾಣ ಬೆಳಸಲಿದೆ. ಅಲ್ಲಿ ಜೂನ್, ಜುಲೈ , ಆಗಸ್ಟ್​ ಮತ್ತು ಸೆಪ್ಟೆಂಬರ್​ ತಿಂಗಳವರೆಗೂ ಇರಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಪಂದ್ಯಗಳ ಸರಣಿ ನಡೆಯಲಿದೆ.

ಜುಲೈನಲ್ಲಿ ಖಾಲಿಯಿದ್ದರೂ ಮತ್ತೆ ವಾಪಸ್​ ಬಂದು ಇಲ್ಲಿ ಕ್ವಾರಂಟೈನ್ ಮಾಡಿ ಮತ್ತೆ ಇಂಗ್ಲೆಂಡ್​ಗೆ ತೆರಳಿ ಅಲ್ಲಿ ಕ್ವಾರಂಟೈನ್​ ಮಾಡುವುದಕ್ಕಿಂತ ಆ ತಿಂಗಳು ಅಲ್ಲೇ ಉಳಿದುಕೊಡು,ಇಂಗ್ಲೀಷ್ ಪರಿಸ್ಥಿತಿಗೆ ಹೊಂದಿಕೊಳ್ಳುವುದಕ್ಕೆ ಟೀಂ ಇಂಡಿಯಾ ನಿರ್ಧಿರಿಸಿದೆ. ಇತ್ತ ಅದೇ ಸಂದರ್ಭದಲ್ಲಿ ಭಾರತ 3 ಏಕದಿನ ಮತ್ತು 5 ಟಿ-20 ಪಂದ್ಯಗಳ ಸರಣಿಯನ್ನಾಡಲು ಲಂಕಾಗೆ ಪ್ರವಾಸ ಕೈಗೊಳ್ಳಲಿದೆ.

ಒಂದೇ ಅವಧಿಯಲ್ಲಿ ಟೀಂ ಇಂಡಿಯಾದ ಎರಡು ತಂಡಗಳಿಂದ ಕ್ರಿಕೆಟ್​

ನಾವು ಸೀನಿಯರ್ ಪುರುಷರ ತಂಡಕ್ಕಾಗಿ ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ಸರಣಿ ಆಯೋಜಿಸಿದ್ದೇವೆ. ಈ ತಂಡ ತುಂಬಾ ವಿಭಿನ್ನವಾಗಿರಲಿದೆ. ಅವರೆಲ್ಲರೂ ವೈಟ್​ ಬಾಲ್ ಸ್ಪೆಷಲಿಸ್ಟ್​ಗಳಾಗಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜುಲೈನಲ್ಲಿ ಭಾರತ ಪುರುಷರಿಗೆ ಯಾವುದೇ ಅಧಿಕೃತ ಪಂದ್ಯಗಳಿರುವುದಿಲ್ಲ. ಈ ಸಂದರ್ಭದಲ್ಲಿ ಭಾರತ ತಂಡಗಳ ನಡುವೆ ಅಭ್ಯಾಸ ಪಂದ್ಯಗಳು ಮಾತ್ರ ನಡೆಯಲಿವೆ. ಆದ್ದರಿಂದ ಸೀಮಿತ ಓವರ್​ಗಳ ಸರಣಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಅಮೂಲ್ಯ ಸಂದರ್ಭದಲ್ಲಿ ವೈಟ್​ಬಾಲ್​ ಪರಿಣಿತರಿಗೆ ಕೆಲವು ಪಂದ್ಯಗಳನ್ನಾಡಿಸುವುದು ಉಪಯುಕ್ತವಾಗಿರುತ್ತದೆ ಎಂದು ದಾದಾ ತಿಳಿಸಿದ್ದಾರೆ.

ಅನುಭವಿ ಪ್ಲೇಯರ್ಸ್ ಜತೆ ಹೊಸ ಮುಖಗಳಿಗೆ ಅವಕಾಶ

ಇದರಿಂದ ಟೆಸ್ಟ್​ ತಂಡದಿಂದ ಹೊರಬಿದ್ದಿರುವ ಅನುಭವಿ ಶಿಖರ್ ಧವನ್, ಭುವನೇಶ್ವರ್​ ಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಸೀಮಿತ ಓವರ್​ಗಳಲ್ಲಿ ಭರವಸೆ ಮೂಡಿಸಿರುವ ಸೂರ್ಯ ಕುಮಾರ್ ಯಾದವ್, ಪೃಥ್ವಿ ಶಾ, ಇಶಾನ್ ಕಿಶನ್, ಸಂಜು ಸಾಮ್ಸನ್​ ಹಾಗೂ ಐಪಿಎಲ್​ನಲ್ಲಿ ಮಿಂಚಿರುವ ಹೊಸ ಮುಖಗಳಾದ ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ ಸೇರಿದಂತೆ ಬಲಿಷ್ಠವಾದ ಒಂದು ತಂಡ ಕಟ್ಟಲು ಸಮರ್ಥರಾಗಿದ್ದಾರೆ.

ಇದನ್ನು ಓದಿ:ಜುಲೈನಲ್ಲಿ ಭಾರತ ತಂಡದಿಂದ ಲಂಕಾ ಪ್ರವಾಸ, ಸದ್ಯಕ್ಕೆ ಐಪಿಎಲ್ ಅಸಾಧ್ಯ ಎಂದ ದಾದಾ

ABOUT THE AUTHOR

...view details