ಕರ್ನಾಟಕ

karnataka

ETV Bharat / sports

ಸಾಹಾ ಹೇಳಿಕೆಯಿಂದ ನೋವಾಗಿಲ್ಲ, ಅವರ ಮೇಲೆ ಅಪಾರ ಗೌರವವಿದೆ: ರಾಹುಲ್ ದ್ರಾವಿಡ್​

ಭಾರತೀಯ ಕ್ರಿಕೆಟ್‌ಗೆ ವೃದ್ಧಿಮಾನ್​ ಸಾಹಾ ನೀಡಿದ ಕೊಡುಗೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಹಿನ್ನೆಲೆಯಲ್ಲಿ ಅವರ ಜೊತೆ ನನ್ನ ಸಂಭಾಷಣೆ ನಡೆದಿತ್ತು. ಅವರಿಗೆ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಪ್ರಾಮಾಣಿಕ ನಿಲುವು ಮತ್ತು ಸ್ಪಷ್ಟತೆಯ ಅಗತ್ಯತೆ ಇದೆ. ಈ ಬಗ್ಗೆ ಅವರು ಮಾಧ್ಯಮಗಳಿಂದ ತಿಳಿದುಕೊಳ್ಳುವುದು ನನಗೆ ಬೇಕಿರಲಿಲ್ಲ ಎಂದು ರಾಹುಲ್‌ ದ್ರಾವಿಡ್ ಹೇಳಿದರು.

coach-rahul
ರಾಹುಲ್ ದ್ರಾವಿಡ್​

By

Published : Feb 21, 2022, 7:03 AM IST

ಕೋಲ್ಕತ್ತಾ:ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೆ ತಮ್ಮನ್ನು ಕೈಬಿಟ್ಟಿದ್ದರ ವಿರುದ್ಧ ಹಿರಿಯ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹಾ ಭಾರತ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ರಾಹುಲ್​ ದ್ರಾವಿಡ್​ ಪ್ರತಿಕ್ರಿಯಿಸಿದ್ದು, ವೃದ್ಧಿಮಾನ್​ ಸಾಹಾರ ಹೇಳಿಕೆಯಿಂದ ನನಗೆ ನೋವಾಗಿಲ್ಲ, ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದ್ರೆ ಅವರಿಗೆ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಪ್ರಾಮಾಣಿಕ ನಿಲುವು ಹಾಗು ಸ್ಪಷ್ಟತೆ ಬೇಕಿದೆ ಎಂದು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ಸಾಹಾ ತನ್ನ ಸ್ಥಾನದ ಬಗ್ಗೆ ಅರಿತುಕೊಂಡಿದ್ದಾರೆ ಎಂದು ಭಾವಿಸುವೆ. ಆಡುವ ಹನ್ನೊಂದು ಜನರ ಆಯ್ಕೆಯ ವೇಳೆ ನಾನು ಆಟಗಾರರೊಂದಿಗೆ ವೈಯಕ್ತಿಕವಾಗಿ ಸಂಭಾಷಣೆ ನಡೆಸುವೆ. ಈ ವೇಳೆ ಪ್ರದರ್ಶನ ಉತ್ತಮವಾಗಿಲ್ಲ ಎಂದಾಗ ಅವರ ಜೊತೆ ಆಟದ ಕೌಶಲ್ಯಗಳ ಬಗ್ಗೆ ವಿವರಿಸುವೆ. ಇದರಂತೆಯೇ ನಾನು ವೃದ್ಧಿಮಾನ್​ ಸಾಹಾ ಜೊತೆಗೂ ಚರ್ಚಿಸಿದ್ದೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.

ದ್ರಾವಿಡ್- ಸಾಹಾ ಸಂಭಾಷಣೆ ಏನು?: ರಿಷಬ್ ಪಂತ್ ಈಗಾಗಲೇ ಕೀಪಿಂಗ್​ ವಿಭಾಗದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಬ್ಯಾಟಿಂಗ್​ನಲ್ಲೂ ಅವರು ಹಿಂದೆ ಬಿದ್ದಿಲ್ಲ. ಹೀಗಿರುವಾಗ ವೃದ್ಧಿಮಾನ್​ ಸಾಹಾಗೆ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಯೋಚಿಸಲು ಸಲಹೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಯುವ ವಿಕೆಟ್​ ಕೀಪರ್​ ಕೋನಾ ಭರತ್​ ಕೂಡ ಪೈಪೋಟಿ ನೀಡಲಿದ್ದಾರೆ ಎಂದು ವಿವರಿಸಿದ್ದೆ. ಇದು ಅವರನ್ನು ನೋಯಿಸಿರಬಹುದು ಎಂದಿದ್ದಾರೆ.

ಇದನ್ನೂ ಓದಿ:ಯಶ್ ಧುಲ್ ಅವಳಿ ಶತಕ: ಭಾರತಕ್ಕಾಗಿ ಆಡಲು ಯುವ ಬ್ಯಾಟರ್​ ಸಿದ್ಧ ಎಂದ ಡೆಲ್ಲಿ ಕೋಚ್

ABOUT THE AUTHOR

...view details