ಮುಂಬೈ: ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ಕಂಡಂತಹ ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾಗಿರುವ ಇಶಾಂತ್ 300ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
2007ರಲ್ಲಿ ಬಾಂಗ್ಲಾದೇಶದ ವಿರುದ್ಧ ಮಿರ್ಪುರ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಇಶಾಂತ್ ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನಾಡಿ 311 ವಿಕೆಟ್ ಪಡೆದಿದ್ದಾರೆ.
6.4 ಅಡಿ ಎತ್ತರದ ಲಂಬು ವೇಗಿ ಕಳೆದ 14 ವರ್ಷಗಳಿಂದ ಭಾರತ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಅದರಲ್ಲೂ ಜಹೀರ್ ಖಾನ್ ವಿದಾಯದ ನಂತರ ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರ ಎಂದರೆ ತಪ್ಪಾಗಲಾರದು. ಅವರು ಟೆಸ್ಟ್ನಲ್ಲಿ 4 ಬಾರಿ 10 ವಿಕೆಟ್ ಹಾಗೂ 11 ಬಾರಿ 5 ವಿಕೆಟ್ ಗೊಂಚಲನ್ನು ಪಡೆದಿದ್ದಾರೆ. 80 ಏಕದಿನ ಪಂದ್ಯಗಳನ್ನಾಡಿದ್ದು, 115 ವಿಕೆಟ್ ಮತ್ತು 14 ಟಿ20 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ. 2013ರ ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಇಶಾಂತ್ ಪ್ರಮುಖ ಪಾತ್ರವಹಿಸಿದ್ದರು.
ಇಶಾಂತ್ ಶರ್ಮಾ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ
- 2011 vs ವೆಸ್ಟ್ ಇಂಡೀಸ್- 51ಕ್ಕೆ6
- 2014 vs ಇಂಗ್ಲೆಂಡ್ - 74ಕ್ಕೆ7
- 2014 vs ನ್ಯೂಜಿಲ್ಯಾಂಡ್- 51ಕ್ಕೆ 6
- 2015 vs ಶ್ರೀಲಂಕಾ- 54ಕ್ಕೆ 5
- 2018 vs ಇಂಗ್ಲೆಂಡ್- 51ಕ್ಕೆ5