ಕರ್ನಾಟಕ

karnataka

ETV Bharat / sports

India vs West Indies 2nd Test: ವಿಂಡೀಸ್​ಗೆ ನಾಯಕ ಕ್ರಿಗ್​ ಬ್ರಾಥ್​ವೇಟ್​ ಅರ್ಧಶತಕದ ಬಲ; 3ನೇ ದಿನದಾಂತ್ಯಕ್ಕೆ 229/5 - ಭಾರತ ವೆಸ್ಟ್​ ಇಂಡೀಸ್ ಸರಣಿ

ಮಳೆ ಅಡಚಣೆಯ ನಡುವೆಯೂ ಭಾರತ ವಿರುದ್ಧದ 2ನೇ ಟೆಸ್ಟ್​​ನಲ್ಲಿ ವೆಸ್ಟ್​ ಇಂಡೀಸ್​ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿತು. ತಂಡ ಇನ್ನೂ 209 ರನ್​ಗಳ ಹಿನ್ನಡೆಯಲ್ಲಿದೆ. ಪಂದ್ಯ ಟೀಂ ಇಂಡಿಯಾದ ಹಿಡಿತದಲ್ಲಿದೆ. ಇನ್ನೆರಡು ದಿನದ ಆಟ ಬಾಕಿ ಇದೆ.

ಭಾರತ ವೆಸ್ಟ್​ ಇಂಡೀಸ್ ಪಂದ್ಯ
ಭಾರತ ವೆಸ್ಟ್​ ಇಂಡೀಸ್ ಪಂದ್ಯ

By

Published : Jul 23, 2023, 8:00 AM IST

ಪೋರ್ಟ್​ ಆಫ್​ ಸ್ಪೇನ್​:ಸ್ಪಿನ್‌ದ್ವಯರಾದ ರವಿಚಂದ್ರನ್​ ಅಶ್ವಿನ್​, ರವೀಂದ್ರ ಜಡೇಜಾರಂಥ ದಿಗ್ಗಜರನ್ನೇ ಎದುರಿಸಿ ನಿಂತಿರುವ ವೆಸ್ಟ್​ಇಂಡೀಸ್​ ತಂಡ ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸುತ್ತಿದೆ. 3ನೇ ದಿನದಾಂತ್ಯಕ್ಕೆ 5 ವಿಕೆಟ್​ಗೆ 229 ರನ್​ ಗಳಿಸಿದ್ದು, ಇನ್ನೂ 209 ರನ್​ಗಳ ಹಿನ್ನಡೆಯಲ್ಲಿದೆ. ಇನ್ನೆರಡು ದಿನಗಳ ಆಟದ ಅವಧಿ ಬಾಕಿ ಉಳಿದಿದೆ. ಅಲಿಕ್​ ಅಥಾಂಜೆ (37), ಜಾಸನ್​ ಹೋಲ್ಡರ್​ (11) ಕ್ರೀಸ್​ ಉಳಿಸಿಕೊಂಡಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್​ ದಾಳಿಗೆ ನಲುಗಿ 150 ರನ್​ ಗಡಿ ದಾಟಲಾಗದೇ ಹೀನಾಯ ಸೋಲು ಕಂಡಿದ್ದ ಕೆರಿಬಿಯನ್ನರು 2ನೇ ಟೆಸ್ಟ್​ನಲ್ಲಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಭಾರತ ನೀಡಿರುವ 438 ರನ್​ ಗುರಿಯನ್ನು ಬೆನ್ನತ್ತಿರುವ ಬ್ರಾಥ್​ವೇಟ್​ ಪಡೆ ಉತ್ತಮ ಆಟವಾಡುತ್ತಿದೆ.

2ನೇ ದಿನದಾಟದ ಕೊನೆಯಲ್ಲಿ 1 ವಿಕೆಟ್​ಗೆ 86 ರನ್​ ಗಳಿಸಿದ್ದ ವಿಂಡೀಸ್​ಗೆ ಮೂರನೇ ದಿನದಾಟದಲ್ಲಿ ಮಳೆರಾಯ ಕೆಲಕಾಲ ತೊದರೆ ನೀಡಿದ. ಇದರಿಂದ ಪಂದ್ಯ 1 ಗಂಟೆಗೂ ಅಧಿಕ ಕಾಲ ವ್ಯರ್ಥವಾಯಿತು. ಮಳೆ ನಿಂತ ಬಳಿಕ ಆಟ ಆರಂಭಿಸಿದ ಕೆರಿಬಿಯನ್ನರು ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

ನಾಯಕ, ಆರಂಭಿಕ ಬ್ಯಾಟರ್​ ಕ್ರೆಗ್​ ಬ್ರಾಥ್​ವೇಟ್​ 75 ರನ್​ ಗಳಿಸಿ ತಂಡವನ್ನು ಆಸರೆಯಾದರು. ಇನ್ನೊಬ್ಬ ಆರಂಭಿಕ ಟಗೆನರೈನ್​ ಚಂದ್ರಪಾಲ್​ 33, ಕ್ರಿಕ್​ ಮೆಕೆಂಜೆ 32, ಜರ್ಮೈಮ್​ ಬ್ಲಾಕ್​ವುಡ್​, 20, ವಿಕೆಟ್​ ಕೀಪರ್​ ಡ ಸಿಲ್ವಾ 10 ರನ್​ ಗಳಿಸಿದರು. ಮೊದಲ ಪಂದ್ಯದ 2 ಇನಿಂಗ್ಸ್​ನಲ್ಲಿ ಉತ್ತಮ ಆಟವಾಡಿದ್ದ ಅಲಿಕ್ ಅಥಾಂಜೆ ಅಜೇಯ 37 ರನ್​ ಗಳಿಸಿದ್ದರೆ, ಜಾಸನ್​ ಹೋಲ್ಡರ್​ 11 ರನ್​ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ನಡೆಯದ ಭಾರತದ ಬೌಲಿಂಗ್​ ಕರಾಮತ್ತು:ಬೌಲಿಂಗ್​ಗೆ ನೆರವು ನೀಡುವ ಪಿಚ್​ನಲ್ಲಿ ಭಾರತದ ಆಟ ನಡೆಯಲಿಲ್ಲ. ಮೊದಲ ಟೆಸ್ಟ್​ನಲ್ಲಿ ಪೂರ್ಣ ಪ್ರಾಬಲ್ಯ ಮೆರೆದಿದ್ದ ಮಾರಕ ಸ್ಪಿನ್​ ಜೋಡಿ ಅಶ್ವಿನ್​ ಮತ್ತು ಜಡೇಜಾ ಜಾದೂ ಇಲ್ಲಿ ವರ್ಕ್​ ಆಗಲಿಲ್ಲ. ಅಶ್ವಿನ್​ 33 ಓವರ್​ ಎಸೆದರೂ 1 ವಿಕೆಟ್​ ಮಾತ್ರ ಪಡೆದರು. ಜಡೇಜಾ 25 ಓವರ್​ ಹಾಕಿದ್ದು, 2 ವಿಕೆಟ್​ ಕಿತ್ತಿದ್ದಾರೆ. ಮೊಹಮದ್​ ಸಿರಾಜ್, ಚೊಚ್ಚಲ ಪಂದ್ಯವಾಡುತ್ತಿರುವ ಮುಕೇಶ್​ ಕುಮಾರ್​ ತಲಾ 1 ವಿಕೆಟ್​ ಗಳಿಸಿದ್ದಾರೆ.

ಮೊದಲ ಇನಿಂಗ್ಸ್​ನಲ್ಲಿ ಭಾರತ, ಬ್ಯಾಟಿಂಗ್​ ಕಿಂಗ್ ವಿರಾಟ್​ ಕೊಹ್ಲಿ (121) ದಾಖಲೆಯ ಶತಕ, ನಾಯಕ ರೋಹಿತ್​ ಶರ್ಮಾ 80, ಮೊದಲ ಪಂದ್ಯದ ಹೀರೋ ಯಶಸ್ವಿ ಜೈಸ್ವಾಲ್​ 57, ರವೀಂದ್ರ ಜಡೇಜಾ 61, ಆರ್​.ಅಶ್ವಿನ್​ 56 ರನ್​ಗಳ ನೆರವಿನಿಂದ 438 ರನ್​ ಗಳಿಸಿದೆ.

ಇದನ್ನೂ ಓದಿ:India vs West Indies 2nd Test : 438 ರನ್​ ಗಳಿಸಿದ ಭಾರತ.. ವೆಸ್ಟ್ ​ಇಂಡೀಸ್​ 86-1

ABOUT THE AUTHOR

...view details