ಕರ್ನಾಟಕ

karnataka

ETV Bharat / sports

ವರ್ಷದ ಚೊಚ್ಚಲ ಸರಣಿ ಗೆದ್ದ ಭಾರತ: 91 ರನ್​ಗಳ ಬೃಹತ್​ ಮೊತ್ತದ ಗೆಲುವು ಸಾಧಿಸಿ ವಿಕ್ರಮ

ವರ್ಷದ ಮೊದಲ ಸರಣಿ ಗೆದ್ದ ಭಾರತ - ಭಾರತಕ್ಕೆ 91 ಗಳ ಗೆಲುವು - 137ಕ್ಕೆ ಆಲ್​ ಔಟ್ ಆದ ಶ್ರೀಲಂಕಾ.

cricket
ವರ್ಷದ ಚೊಚ್ಚಲ ಸರಣಿ ಗೆದ್ದ ಭಾರತ

By

Published : Jan 7, 2023, 10:42 PM IST

ರಾಜ್​ಕೋಟ್​:ಭಾರತ ನೀಡಿದ್ದ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಸಿಂಹಳೀಯರು 137 ರನ್​ಗೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದು ಕೊಂಡು ಟೀಂ ಇಂಡಿಯಾ ಎದುರು ಮಂಡಿಯೂರಿದ್ದಾರೆ. ಭಾರತದ ಪರ ಅರ್ಷದೀಪ್​ ಸಿಂಗ್​ ಮೂರು ವಿಕೆಟ್​ ಮತ್ತು ಮಲಿಕ್​, ಹಾರ್ದಿಕ್​ ಪಾಂಡ್ಯ, ಚಹಾಲ್​ ತಲಾ ಎರಡು ವಿಕೆಟ್​ ಪಡೆದರು. ಭಾರತ 91ರನ್​ಗಳ ಅಂತರದ ಗೆಲುವು ಸಾಧಿಸುವ ಮೂಲಕ ವರ್ಷದ ಮೊದಲ ಸರಣಿಯನ್ನು ಗೆದ್ದುಕೊಂಡಿತು. ಲಂಕಾ ಪರ 23ರನ್​​ಗಳೇ ಅತೀ ಹೆಚ್ಚಿನ ರನ್​ ಗಳಿಕೆಯಾಗಿದ್ದೇ ಅತಿ ದೊಡ್ಡ ಸ್ಕೋರ್​.

ತಾಳ್ಮೆಯ ಆರಂಭ: ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಲಂಕಾ ಆರಂಭಿಕರು ತಾಳ್ಮೆಯಿಂದ ಭಾರತದ ಆರಂಭಿಕ ಬೌಲಿಂಗ್ ದಾಂಡಿಗರ ದಾಳಿ​ ಎದರುರಿಸಿದರು. ಓವರ್​ಗೆ 10 ರನ್​ ನಂತೆ 4.5 ಓವರ್​ಗೆ 44 ರನ್​ ಗಳಿಸಿದ್ದಾಗ ಅಕ್ಷರ್​ ಪಟೇಲ್ ವಿಕೆಟ್​ ಕೀಪರ್​ ಕುಸಲ್ ಮೆಂಡಿಸ್ ಅವರ ವಿಕೆಟ್​ ಪಡೆದರು. 15 ಎಸೆತದಲ್ಲಿ ಎರಡು ಸಿಕ್ಸರ್​, ಎರಡು ಬೌಂಡರಿ ಸಹಿತ 23 ರನ್​ ಗಳಿಸಿದ್ದ ಮೆಂಡಿಸ್​ ಮಲಿಕ್​ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ ಹಾದಿ ಹಿಡಿದರು.

ಕುಸಲ್​ ಮೆಂಡಿಸ್​ ಬೆನ್ನಲ್ಲೆ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ವಿಕೆಟ್​ ಒಪ್ಪಿಸಿದರು. ಅರ್ಷದೀಪ್​ ಸಿಂಗ್​ ದಾಳಿಗೆ ಶಿವಂ ಮಾವಿಗೆ ಕ್ಯಾಚ್​ ಇತ್ತರು. ನಿಸ್ಸಾಂಕ 17 ಎಸೆತ ಎದುರಿಸಿ 3 ಫೋರ್​ನಿಂದ 15 ರನ್​ಗಳಿಸಿ ಆಡುತ್ತಿದ್ದರು. ನಿಸ್ಸಾಂಕ ಬೆನ್ನಲ್ಲೇ ಮೂರನೇ ವಿಕೆಟ್​ ಆಗಿ ಬಂದಿದ್ದ ಅವಿಷ್ಕಾ ಫೆರ್ನಾಂಡೊ(1) ಔಟ್​ ಆಗಿ ಪೆವಿಲಿಯನ್​ಗೆ ಮರಳಿದರು. ನಂತರ ಬಂದ ಧನಂಜಯ ಡಿ ಸಿಲ್ವಾ ಮತ್ತು ಚರಿತ್ ಅಸಲಂಕಾ ಭಾರತೀಯ ಬೌಲರ್​ಗಳ ಎದುರು ಕೊಂಚ ಬಿರುಸಿನ ಆಟಕ್ಕೆ ಮುಂದಾದರು. ಚರಿತ್ ಅಸಲಂಕಾ ಒಂದು ಸಿಕ್ಸರ್​ ಮತ್ತು 2 ಬೌಂಡರಿಯಿಂದ 14 ಎಸೆತದಲ್ಲಿ 19 ರನ್​ಗಳಿಸಿ ಔಟ್​ ಆದರು. ನಂತರ ನಾಯಕ ದಸುನ್ ಶನಕ ಸಿಲ್ವಾ ಅವರೊಂದಿಗೆ ಜೊತೆಯಾದರು.

ಸಿಲ್ವ ಚಹಾಲ್​ ಎಸೆತಕ್ಕೆ ಗಿಲ್​ಗೆ ಕ್ಯಾಚ್​ ಇತ್ತು ವಿಕೆಟ್​ ಬಿಟ್ಟುಕೊಟ್ಟರು. 22 ರನ್​ ಗಳಿಸಿದ್ದ ಸಿಲ್ವಾ ನಾಯಕ ಶನಕ ಅವರ ಜೊತೆ ಗೆಲುವಿನ ವರೆಗೆ ನಿಲ್ಲುತ್ತಾರೆ ಎಂದು ಭಾವಿಸುವಂತೆ ಜೊತೆಯಾಟ ಕಂಡಿತ್ತು. ಸಿಲ್ವಾ ನಂತರ ಬಂದ ಹಸರಂಗ 9 ರನ್​ಗೆ ಪೆವಿಲಿಯನ್​ ಹಾದಿ ಹಿಡಿದರು. ಚಮಿಕಾ ಕರುಣಾರತ್ನೆ ನಾಯಕ ಹಾರ್ದಿಕ್​ಗೆ ಎಲ್​ಬಿಡ್ಲ್ಯೂಗೆ ಬಲಿಯಾದರು.

ಫಾರ್ಮ್​ನಲ್ಲಿದ್ದು ಒಂದೆಡೆ ವಿಕೆಟ್​ ನಿಲ್ಲಿಸಿ ನಾಯಕ ಶನಕ ಗೆಲುವಿನ ರನ್​ಗಳಿಸಲು ಪ್ರಯತ್ನಿಸುತ್ತಿದ್ದರು. ಇತ್ತ ಕಡೆ ವಿಕೆಟ್​ ಉರುಳುತ್ತಿದ್ದರಿಂದ ಒತ್ತಡಕ್ಕೆ ಒಳಗಾದ ನಾಯಕ ಶನಕ ಬಿರುಸಿನ ಆಟಕ್ಕೆ ಮುಂದಾದರು. ಈ ವೇಳೆ ಅರ್ಷದೀಪ್​ ಸಿಂಗ್​ ಅವರ ಬೌಲ್​ನಲ್ಲಿ ಸಿಕ್ಸ್​ ಗಳಿಸಲು ಹೋಗಿ ಅಕ್ಷರ್​ಗೆ ಕ್ಯಾಚ್​ ಇತ್ತು 23 ರನ್​ಗೆ ಪೆವಿಲಿಯನ್​ಗೆ ತೆರಳಿದರು. ದಿಲ್ಶನ್ ಮಧುಶಂಕ 1 ರನ್​ಗೆ ಔಟ್​ ಆದರು. ಕಸುನ್ ರಜಿತ 9 ರನ್​ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಭಾರತ 91 ರನ್​ಗಳ ಗೆಲುವು ಸಾಧಿಸಿತು.

ಭಾರತದ ಪರ ಅರ್ಷದೀಪ್​ ಸಿಂಗ್​ 2.4 ಓವರ್​ನಲ್ಲಿ 7.5 ಎಕಾನಮಿಯಲ್ಲಿ 20 ರನ್​​ ಬಿಟ್ಟುಕೊಟ್ಟು ಮೂರು ವಿಕೆಟ್​ ಪಡೆದರು. ನಾಯಕ ಹಾರ್ದಿಕ್​ ಪಾಂಡ್ಯ, ಮಲಿಕ್​ ಮತ್ತು ಚಹಾಲ್ ತಲಾ ಎರಡು ವಿಕೆಟ್​ ಪಡೆದರು. ಅಕ್ಷರ್​ ಪಟೇಲ್​ 1 ವಿಕೆಟ್​ ಕಬಳಿಸಿದರು. ಪಂದ್ಯ ಶ್ರೇಷ್ಠ​ ಪ್ರಶಸ್ತಿ ಶತಕ ಗಳಿಸಿದ ಸೂರ್ಯ ಕುಮಾರ್​ ಯಾದವ್​ಗೆ ನೀಡಲಾಯಿತು. ಅಕ್ಷರ್​ ಪಟೇಲ್​ಗೆ ಆಲ್​ ರೌಂಡರ್​ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ:ಲಂಕಾ ವಿರುದ್ಧ ಸಿಡಿದ ಸೂರ್ಯಕುಮಾರ್​ ಯಾದವ್​ ಶತಕ: ಲಂಕಾಕ್ಕೆ 229 ರನ್​ಗಳ ಗುರಿ

ABOUT THE AUTHOR

...view details