ಕೊಲಂಬೊ:ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಗೆ ಇದೀಗ ಮತ್ತೊಮ್ಮೆ ಕೊರೊನಾ ವೈರಸ್ ಹಾವಳಿ ತಟ್ಟಿದೆ. ಅದೇ ಕಾರಣಕ್ಕಾಗಿ ಉಭಯ ತಂಡಗಳ ನಡುವಿನ ಎರಡನೇ ಟಿ-20 ಪಂದ್ಯವನ್ನು ಮುಂದೂಡಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಂಡಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಇದೀಗ ಎಲ್ಲ ಪ್ಲೇಯರ್ಸ್ ಹಾಗೂ ಸಹಾಯಕ ಸಿಬ್ಬಂದಿ ಆರ್ಟಿ-ಪಿಸಿಆರ್ ಟೆಸ್ಟ್ಗೊಳಪಡಲಿದ್ದಾರೆ ಎಂದು ತಿಳಿಸಿದೆ. ಇದರ ಜೊತೆಗೆ ಇಂದು ನಡೆಯಬೇಕಾಗಿದ್ದ ಪಂದ್ಯ ನಾಳೆಗೆ ಮುಂದೂಡಿಕೆಯಾಗಿದೆ.