ಸೌತಾಂಪ್ಟನ್: ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅದ್ಭುತ ಬೌಲಿಂಗ್ ದಾಳಿಯ ಮುಂದೆ ಪರದಾಡಿದ ಕಿವೀಸ್ ಪಡೆ 5ನೇ ದಿನ ಮೊದಲ ಸೆಷನ್ನಲ್ಲಿ 3 ವಿಕೆಟ್ ಕಳೆದುಕೊಂಡಿದ್ದಲ್ಲದೇ, ರನ್ಗಳಿಸಲು ಕೂಡ ಹೆಣಗಾಡುತ್ತಿದೆ.
101ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆಟ ಮುಂದುವರಿಸಿದ ನ್ಯೂಜಿಲ್ಯಾಂಡ್ ತಂಡ ಆ ಮೊತ್ತಕ್ಕೆ 16 ರನ್ಗಳಿಸುವ ವೇಳೆಗೆ ಅನುಭವಿ ರಾಸ್ ಟೇಲರ್(11) ವಿಕೆಟ್ ಕಳೆದುಕೊಂಡಿತು. ಟೇಲರ್ ಅವರನ್ನು ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಗಿಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ನಂತರ ಬಂದ ಹೆನ್ರಿ ನಿಕೋಲ್ಸ್ ಕೇವಲ 7 ರನ್ಗಳಿಸಿ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ಔಟಾದರು. ತಮ್ಮ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಬಿಜೆ ವಾಟ್ಲಿಂಗ್ ಕೇವಲ 1 ರನ್ಗಳಿಸಿ ಶಮಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.