ನ್ಯಾಟಿಂಗ್ಹ್ಯಾಮ್(ಇಂಗ್ಲೆಂಡ್):ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಟೆಸ್ಟ್ ಪಂದ್ಯಗಳ ಸರಣಿ ಆರಂಭಗೊಂಡಿದ್ದು, ನ್ಯಾಟಿಂಗ್ಹ್ಯಾಮ್ನಲ್ಲಿ ಉಭಯ ತಂಡ ಮೊದಲ ಪಂದ್ಯವನ್ನಾಡಲು ಕಣಕ್ಕಿಳಿದಿವೆ. ಇದರ ಮಧ್ಯೆ ಅಪರೂಪದ ಘಟನೆವೊಂದು ನಡೆದಿದ್ದು, ಟ್ವಿಟರ್ನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
40 ವರ್ಷಗಳಿಂದ ಯಾವುದೇ ಪಂದ್ಯ ಮಿಸ್ ಮಾಡಿಕೊಳ್ಳದೇ ಕ್ರಿಕೆಟ್ ಪಂದ್ಯಗಳನ್ನ ವೀಕ್ಷಣೆ ಮಾಡ್ತಿದ್ದ ವ್ಯಕ್ತಿಯೊಬ್ಬ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದಾನೆ. ಆದರೆ, ಮೃತ ವ್ಯಕ್ತಿಯ ನೆನಪಿಗೋಸ್ಕರ ಆತನ ಸ್ನೇಹಿತನೊಬ್ಬ ಇಂದಿನ ಪಂದ್ಯಕ್ಕಾಗಿ ಆಸನವೊಂದನ್ನ ಕಾಯ್ದಿರಿಸಿದ್ದಾನೆ. ಆ ಆಸನ ಖಾಲಿ ಇರುವ ಕಾರಣ ಪ್ರಶ್ನೆ ಮಾಡಿದ್ದಾಗ ಈ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿರಿ: ಇಂಗ್ಲೆಂಡ್ಗೆ ಮರ್ಮಾಘಾತ ನೀಡಿದ ಭಾರತೀಯ ಬೌಲರ್ಗಳು..183ಕ್ಕೆ ಆಂಗ್ಲರ ಪತನ!
ಜಾನ್ ಕ್ಲಾರ್ಕ್ ಕ್ರಿಕೆಟ್ ಪ್ರೇಮಿಯಾಗಿದ್ದು, ಪ್ರತಿಯೊಂದು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಆದರೆ, ಕಳೆದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದನು. ಆತನ ಸ್ನೇಹಿತ ಆಸನವೊಂದನ್ನ ಕಾಯ್ದಿರಿಸಿ, ಪಂದ್ಯ ಮಿಸ್ ಮಾಡಿಕೊಳ್ಳದಂತೆ ನೋಡಿಕೊಂಡಿದ್ದಾರೆ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ವೀಕ್ಷಣೆ ಮಾಡಲು ಆಗಮಿಸುವ ಕ್ರೀಡಾಭಿಮಾನಿಗಳು ಕೂಡ ಕೆಲವೊಮ್ಮೆ ಸುದ್ದಿಯಾಗುತ್ತಾರೆ. ಅಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿದ್ದು, ಕೆಲವರು ತಮ್ಮ ಪ್ರೇಯಸಿಗೆ ಪ್ರಪೋಸ್ ಸಹ ಮಾಡಿದ್ದಾರೆ.
ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 183ರನ್ಗಳಿಕೆ ಮಾಡಿದೆ. ಟೀಂ ಇಂಡಿಯಾ ಪರ ಮಿಂಚಿರುವ ಬುಮ್ರಾ 4ವಿಕೆಟ್, ಮೊಹಮ್ಮದ್ ಶಮಿ 3, ಠಾಕೂರ್ 2 ಹಾಗೂ ಸಿರಾಜ್ 1 ವಿಕೆಟ್ ಪಡೆದುಕೊಂಡಿದ್ದಾರೆ.