ಲಂಡನ್:ಒಂದು ಕಾಲದಲ್ಲಿ ಭಾರತದ 2ನೇ ವಾಲ್ ಎಂದೇ ಕರೆಸಿಕೊಳ್ಳುತ್ತಿದ್ದ ಚೇತೇಶ್ವರ್ ಪೂಜಾರ ದಯನೀಯ ವೈಫಲ್ಯ ಅನುಭವಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಅರ್ಧಶತಕವಿಲ್ಲದೇ ಸತತ 10 ಇನ್ನಿಂಗ್ಸ್ ಕಳೆದಿದ್ದಾರೆ.
ಮೊದಲ ಪಂದ್ಯದಲ್ಲಿ 4 ರನ್ಗೆ ವಿಕೆಟ್ ಒಪ್ಪಿಸಿದ್ದ ಪೂಜಾರ ಇಂದಿನ ಪಂದ್ಯದಲ್ಲಿ ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇದಲ್ಲದೇ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ 8 ಮತ್ತು 15 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು.
ಅವರು ಕಳೆದ 10 ಇನ್ನಿಂಗ್ಸ್ಗಳಲ್ಲಿ 15,21, 7,0,17,8,15,4,12*,9 ರನ್ಗಳಿಸಿದ್ದಾರೆ. ಇನ್ನು ಕಳೆದ 2 ವರ್ಷಗಳಲ್ಲಿ ಒಂದೂ ಶತಕ ಬಾರಿಸಿಲ್ಲ. ಕಳೆದ 25 ಇನ್ನಿಂಗ್ಸ್ಗಳಲ್ಲಿ 5 ಅರ್ಧಶತಕ ಮಾತ್ರಗಳಿಸಿದ್ದಾರೆ.
ಈಗಾಗಲೇ ನಿಧಾನಗತಿ ಇನ್ನಿಂಗ್ಸ್ನಿಂದ ಟೀಕೆಗೆ ಗುರಿಯಾಗಿರುವ ಚೇತೇಶ್ವರ್ ಪೂಜಾರ ಇದೀಗ ಸತತ ವೈಫಲ್ಯ ಅನುಭವಿಸುತ್ತಿರುವುದರಿಂದ ತಂಡದಲ್ಲಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಟೀಮ್ ಮ್ಯಾನೇಜ್ಮೆಂಟ್ ಸೂರ್ಯಕುಮಾರ್ ಯಾದವ್ ಅವರನ್ನು ಕೂಡ ಮಧ್ಯಮ ಕ್ರಮಾಂಕಕ್ಕೆಂದು ಇಂಗ್ಲೆಂಡ್ಗೆ ಕರೆಸಿಕೊಂಡಿದೆ. ಅಲ್ಲದೇ ಹನುಮ ವಿಹಾರಿ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪೂಜಾರ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೆ ಮುಂದಿನ ಪಂದ್ಯಗಳಲ್ಲಿ ತಂಡದಿಂದ ಹೊರಬೀಳಲಿದ್ದಾರೆ ಎನ್ನುವುದರಲ್ಲಿ ಯಾವುದೇ ಅಶ್ಚರ್ಯವಿಲ್ಲ.
ಇದನ್ನು ಓದಿ:ಸತತ 8ನೇ ಬಾರಿ ಇಂಗ್ಲೆಂಡ್ನಲ್ಲಿ ಟಾಸ್ ಸೋತ ಕೊಹ್ಲಿ!: ಟಾಸ್ ಸೋತವರಿಗೂ ಅವಾರ್ಡ್ ಕೊಡಿ ಎಂದ ಅಭಿಮಾನಿಗಳು