ಬರ್ಮಿಂಗ್ಹ್ಯಾಮ್:ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್ಗಳ ಗೆಲುವಿನ ನಗೆ ಬೀರಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಚುಟುಕು ಸರಣಿ ಕೈವಶ ಮಾಡಿಕೊಂಡಿದೆ. ಜೊತೆಗೆ ಆಂಗ್ಲರ ನಾಡಿನಲ್ಲೇ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 170ರನ್ಗಳಿಕೆ ಮಾಡಿತು. ತಂಡದ ಪರ ರೋಹಿತ್ ಶರ್ಮಾ(31), ಜಡೇಜಾ ಅಜೇಯ(46)ರನ್ಗಳಿಕೆ ಮಾಡಿದರು.
ರೋಹಿತ್-ರಿಷಭ್ ಉತ್ತಮ ಆರಂಭ:ನಾಯಕ ರೋಹಿತ್ ಶರ್ಮಾ(31) ಮತ್ತು ರಿಷಭ್ ಪಂತ್(26) ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್ಗೆ 49ರನ್ಗಳಿಕೆ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಜಡೇಜಾ ಆಸರೆಯಾದರು. ಮಿಂಚಿನ ಬ್ಯಾಟಿಂಗ್ ಬಲದಿಂದ 29 ಎಸೆತಗಳಲ್ಲಿ ಅಜೇಯ 46ರನ್ಗಳಿಕೆ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್(15), ಪಾಂಡ್ಯಾ(12), ಕಾರ್ತಿಕ್(12), ಹರ್ಷಲ್ ಪಟೇಲ್(12) ವಿಕೆಟ್ ಒಪ್ಪಿಸಿದರು.
171ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಭುವನೇಶ್ವರ್ ಎಸೆದ ಮೊದಲ ಎಸೆತದಲ್ಲೇ ರಾಯ್(0) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಕ್ಯಾಪ್ಟನ್ ಬಟ್ಲರ್(4) ಭುವಿ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಲನ್(19), ಲಿವಿಗ್ಸ್ಟೋನ್(15)ರನ್ಗಳಿಕೆ ಮಾಡಿ ಔಟಾದರು.