ನವದೆಹಲಿ:ಎರಡನೇ ಟೆಸ್ಟ್ನ ಮೊದಲ ದಿನದಂದು ವಾರ್ನರ್ಗೆ ಮೊಹಮ್ಮದ್ ಸಿರಾಜ್ ಬೌನ್ಸರ್ ಬಾಲ್ಗಳ ದಾಳಿ ಮಾಡಿದರು. ಮೂರು ಬಾರಿ ವಾರ್ನರ್ ಅವರ ತಲೆಗೆ ಚೆಂಡು ಬಡಿಯಿತು. ಒಂಬತ್ತನೇ ಓವರ್ನಲ್ಲಿ ಬಲವಾಗಿ ವಾರ್ನರ್ ತೆಲೆ ಬಡಿದ ನಂತರ ಫಿಸಿಯೋ ಬಂದು ಪರೀಕ್ಷಿಸಿದರು. ಹದಿನೈದನೇ ಓವರ್ನಲ್ಲಿ 44 ಬಾಲ್ ಎದುರಿಸಿ 15 ರನ್ ಗಳಿಸಿ ಆಡುತ್ತಿದ್ದ ವಾರ್ನರ್ ಮಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.
15 ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿ ಹಿಡಿದ ವಾರ್ನರ್ ಅವರು ಫಾರ್ಮ್ ಬಗ್ಗೆ ಟೀಕೆಗಳು ಕೇಳಿ ಬಂದವು. ಸತತ ಮೂರು ಇನ್ನಿಂಗ್ಸ್ನಿಂದ ವಿಫಲವಾಗುತ್ತಿರುವುದು ಸಹ ಈ ಟೀಕೆಗೆ ಕಾರಣವಾಗಿದೆ. ಆದರೆ ಈ ಟೀಕೆಗಳಿಗೆ ಆಸ್ಟ್ರೇಲಿಯಾ ಆರಂಭಿಕ ಉಸ್ಮಾನ್ ಖವಾಜಾ ಪ್ರತಿಕ್ರಿಯಿಸಿ "ಕೇವಲ ಮೂರು ಇನ್ನಿಂಗ್ಸ್ನಿಂದ ಬ್ಯಾಟಿಂಗ್ನ ಲಯದ ಬಗ್ಗೆ ಹೇಳಲಾಗುವುದಿಲ್ಲ ಎಂದಿದ್ದಾರೆ.
ವಾರ್ನರ್ ಭಾರತದ ಪ್ರವಾಸ ಸರಣಿಯಲ್ಲಿ 1, 10 ಮತ್ತು 15 ರನ್ ಗಳಿಸಿದ್ದಾರೆ. ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸಿಸ್ಗೆ ಆರಂಭಿಕರು 50 ರನ್ ಜೊತೆಯಾಟ ಮಾಡಿದರು. 15 ರನ್ ಗಳಿಸಿದ್ದ ವಾರ್ನರ್ ಈ ವೇಳೆ ಔಟ್ ಆದರು ನಂತರ ಆಸ್ಟ್ರೇಲಿಯಾ ಸತತ ಕುಸಿತ ಕಂಡಿತಾದರೂ ಖವಾಜಾ 81 ರನ್ ಗಳಿಸಿದ್ದರು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಸ್ಮಾನ್ ಖವಾಜಾ ಅವರು, 'ವಾರ್ನರ್ ಫಾರ್ಮ್ ಕಂಡುಕೊಳ್ಳಲು ಕಷ್ಟ ಪಡುತ್ತಿದ್ದಾರೆ ಎಂದು ಹೇಳುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಮೊದಲ ಪಂದ್ಯದಲ್ಲಿ ವಾರ್ನರ್ ಅಶ್ವಿನ್ ಬೌಲಿಂಗ್ನಲ್ಲಿ ಎರಡು ಬೌಂಡರಿ ಬಾರಿಸಿದ್ದರು. ಆದರೆ, ನಂತರ ಅವರು ಎಲ್ಬಿಡಬ್ಲ್ಯುಗೆ ಔಟ್ ಆದರು. ಆದ್ದರಿಂದ ಅವರು ಆಕ್ರಮಣಕಾರಿ ಪ್ರದರ್ಶನವನ್ನು ತೋರಿಸುತ್ತಿದ್ದಾರೆ' ಎಂದರು.