ನಾಗ್ಪುರ (ಮಹಾರಾಷ್ಟ್ರ):ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 24 ಓವರ್‌ಗಳನ್ನು ಕಡಿತಗೊಳಿಸಲಾಗಿದೆ. ಪ್ರತಿ ತಂಡಕ್ಕೆ ತಲಾ 8 ಓವರ್‌ಗಳನ್ನು ನಿಗದಿ ಮಾಡಿದ್ದು, ಒಟ್ಟು 16 ಓವರ್ಗಳಿಗೆ ಪಂದ್ಯ ನಡೆಯಲಿದೆ.
ನಾಗ್ಪುರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಮೈದಾನ ಒದ್ದೆಯಾಗಿ ಕಾರಣ ಟಾಸ್ ವಿಳಂಬವಾಗಿತ್ತು. ಸಂಜೆ 7 ಗಂಟೆ, 8 ಗಂಟೆ ಹಾಗೂ ನಂತರ 8.45ಕ್ಕೆ ಗ್ರೌಂಡ್ ಅನ್ನು ಪರಿಶೀಲನೆ ನಂತರ ಕೊನೆಗೆ 9.15ಕ್ಕೆ ಟಾಸ್ ನಿಗದಿ ಮಾಡಲಾಯಿತು. ಅಲ್ಲದೇ, 9.30ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಯಿತು. ಜೊತೆಗೆ ಪ್ರತಿ ಇನಿಂಗ್ಸ್‌ನಲ್ಲಿ ಎಂಟು ಓವರ್‌ಗಳನ್ನು ನಿಗದಿ ಮಾಡಿ ಎರಡು ಓವರ್‌ಗಳು ಪವರ್‌ಪ್ಲೇ ಎಂದು ಘೋಷಿಸಲಾಯಿತು.
1ನೇ ಇನಿಂಗ್ಸ್ 9.30ಕ್ಕೆ ಆರಂಭವಾಗಿ 10:04ಕ್ಕೆ ಮುಗಿಯಲಿದೆ. ಮಧ್ಯಂತರವು 10.04ರಿಂದ 10.14ರವರೆಗೆ 10 ನಿಮಿಷ ಇರಲಿದೆ. 2ನೇ ಇನಿಂಗ್ಸ್ 10.14ಕ್ಕೆ ಶುರುವಾಗಿ 10.48ಕ್ಕೆ ಮುಗಿಯಲಿದೆ. ಪ್ರತಿ ಬೌಲರ್‌ಗೆ ಗರಿಷ್ಠ 2 ಓವರ್‌ಗಳು ಹಾಗೂ ಸ್ಲೋ ಓವರ್ ರೇಟ್‌ಗೆ ಆಟದ ಪೆನಾಲ್ಟಿಯೂ ಇರುವುದಿಲ್ಲ ಹಾಗೂ ಯಾವುದೇ ಡ್ರಿಂಕ್ಸ್ ವಿರಾಮವ ಇರುವುದಿಲ್ಲ.
ಪಂಜಾಬ್ನ ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನಾಲ್ಕು ವಿಕೆಟ್ಗಳಿಂದ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂದು ನಾಗ್ಪುರದಲ್ಲಿ ಎರಡನೇ ಪಂದ್ಯ ಜರುಗಲಿದ್ದು, ಸೆಪ್ಟೆಂಬರ್ 25ರಂದು ಹೈದರಾಬಾದ್ನಲ್ಲಿ ಮೂರನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.
ಇದನ್ನೂ ಓದಿ:ಟಿಕೆಟ್ಗಳ ಖರೀದಿಗಾಗಿ ನೂಕುನುಗ್ಗಲು: ಅಜರುದ್ದೀನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯ