ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಮೊದಲ ಸೆಷನ್ನ ಡ್ರಿಂಗ್ಸ್ ಬ್ರೇಕ್ನ ನಂತರ ಪಂದ್ಯ ಆರಂಭವಾಗುವುದಕ್ಕೂ ಮೊದಲು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್ಮನ್ಗಳ ಗಾರ್ಡ್ (ಬ್ಯಾಟಿಂಗ್ ಮಾಡುವಾಗ ಗುರುತಿಗೆ ಹಾಕುವ ಗೆರೆ) ಅಳಿಸಿ ವಿಕೃತಿ ಮೆರೆದಿದ್ದರು. ಮತ್ತೆ ಕ್ರೀಸ್ಗೆ ಬಂದ ರಿಷಭ್ ಪಂತ್ ಬ್ಯಾಟಿಂಗ್ ಗಾರ್ಡ್ಗಾಗಿ ಅಂಪೈರ್ ಅವರನ್ನು ಕೇಳುತ್ತಿರುವುದನ್ನು ಕಾಣ ಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಟೀವ್ ಸ್ಮಿತ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅದರ ವಿಡಿಯೋವನ್ನು ಪೋಸ್ಟ್ ಮಾಡಿ, " ಎಲ್ಲವನ್ನೂ ಪ್ರಯತ್ನಿಸಿದ, ಸ್ಮಿತ್ ಕೊನೆಗೆ ಬ್ಯಾಟ್ಸ್ಮನ್ಗಳ ಗಾರ್ಡ್ ಸಹ ಒರೆಸಿದರು, ಆದರೆ ಇದು ಏನೂ ಕೆಲಸ ಮಾಡಲಿಲ್ಲ. ಅವರು ಏನೆ ಪ್ರಯತ್ನ ಪಟ್ಟರು ಹನ್ನೆರುಡು ಗಂಟೆಗೆ ಎಲ್ಲವೂ ಗೊತ್ತಾಯಿತು. ನನ್ನ ಭಾರತೀಯ ತಂಡದ ಪ್ರಯತ್ನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.