ಹೈದರಾಬಾದ್: ನಾಳೆಯಿಂದ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗುತ್ತಿದ್ದು, ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ ಇನ್ನು 133 ರನ್ ಗಳಿಸಿದರೆ ವೇಗವಾಗಿ 12 ಸಾವಿರ ರನ್ (ಕೇವಲ 239 ಇನ್ನಿಂಗ್ಸ್) ಬಾರಿಸಿದ ಮೊದಲ ಆಟಗಾರನಾಗಿ ಸಚಿನ್ ದಾಖಲೆ ಮುರಿಯಲಿದ್ದಾರೆ.
ಹಾಗೆಯೇ ಅತಿ ಕಡಿಮೆ ಇನ್ನಿಂಗ್ಸ್ ಎಂಬ ದಾಖಲೆಯೂ ಸೇರುತ್ತದೆ. ಕ್ರಿಕೆಟ್ ದೇವರು ಇಷ್ಟು ರನ್ ಗಡಿ ದಾಟಲು 300 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆಸೀಸ್ ನೆಲದಲ್ಲಿ ಭಾರತ ಮೂರು ಏಕದಿನ, ಮೂರು ಟಿ-20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನಾಳೆಯಿಂದ ಪ್ರಾರಂಭವಾಗುವ ಭಾರತ ಪ್ರವಾಸ 54 ದಿನಗಳ ನಂತರ ಅಂದರೆ ಮುಂದಿನ ವರ್ಷ ಜನವರಿ 19ಕ್ಕೆ ಮುಗಿಯಲಿದೆ.
ಹಾಗೆಯೇ ಮೊದಲ ಇನ್ನಿಂಗ್ಸ್ನಲ್ಲೇ 90 ರನ್ ಹೊಡೆದರೆ ವೇಗವಾಗಿ 2 ಸಾವಿರ ರನ್ ಬಾರಿಸಿದ ಎರಡನೇ ಮತ್ತು ಮುಂದಿನ ಮೂರು ಪಂದ್ಯಗಳಲ್ಲಿ 371 ರನ್ ಬಾರಿಸಿದರೆ ಆಸ್ಟ್ರೇಲಿಯಾದ ವಿರುದ್ಧ ಆಸೀಸ್ ನೆಲದಲ್ಲಿ ವೇಗವಾಗಿ ಸಾವಿರ ರನ್ ಬಾರಿಸಿದ ಮೊದಲ ಆಟಗಾರರಾಲಿದ್ದಾರೆ. ಒಂದು ವೇಳೆ ಅಷ್ಟು ರನ್ ಗಳಿಸಲು 11 ಪಂದ್ಯಗಳನ್ನು ತೆಗೆದುಕೊಂಡರೆ ಎರಡನೇ ಬ್ಯಾಟ್ಸ್ಮನ್ ಆಗಲಿದ್ದಾರೆ.