ಅಡಿಲೇಡ್: ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಅಹರ್ನಿಶಿ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯಂತ ಕಳಪೆ ಆಟವಾಡಿದೆ. ಕೇವಲ 36 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ರನ್ಗೆ ಆಲೌಟ್ ಆದ ಅಪಕೀರ್ತಿಗೆ ಭಾರತೀಯ ತಂಡ ಪಾತ್ರವಾಗಿದೆ.
ಕಾಂಗರೂ ಬೌಲರ್ಗಳ ಭೀಕರ ಬೌಲಿಂಗ್ ದಾಳಿಗೆ ಭಾರತದ ಬ್ಯಾಟ್ಸ್ಮನ್ಗಳು ಹೈರಾಣಾಗಿದ್ದಾರೆ. ಅದ್ಭುತ ಪ್ರದರ್ಶನ ತೋರಿದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್ 4 ವಿಕೆಟ್ ಪಡೆದು ಮಿಂಚಿದರೆ, ಹೆಜಲವುಡ್ 5 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಇನ್ನಿಲ್ಲದಂತೆ ಕಾಡಿದರು.
ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್ಮನ್ ಕೂಡಾ ಎರಡಂಕಿ ರನ್ ಕಲೆ ಹಾಕಲಿಲ್ಲ. ಓಪನರ್ ಆಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಅಗರವಾಲ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪೃಥ್ವಿ ಶಾ ಕೇವಲ 4 ರನ್ಗಳಿಗೆ ಔಟಾದರೆ, ಮಯಾಂಕ್ 9 ರನ್ಗಳಿಸಿದರು.