ನವದೆಹಲಿ:ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕವೂ ದೊಡ್ಡಮಟ್ಟದಲ್ಲಿ ತಿರುಗೇಟು ನೀಡುವ ಮೂಲಕ ಚರಿತ್ರೆ ಸೃಷ್ಟಿಸಿರುವ ಭಾರತ ಕ್ರಿಕೆಟ್ ತಂಡದ ಸಾಧನೆ ಅಸಾಮಾನ್ಯವಾದದ್ದು ಎಂದು ಡಬ್ಲ್ಯೂಡಬ್ಲ್ಯೂಇ ಗ್ಲೋಬಲ್ ಟ್ಯಾಲೆಂಟ್ ಸ್ಟ್ರಾಟಜಿ & ಡೆವಲಪ್ಮೆಂಟ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟ್ರಿಪಲ್ ಹೆಚ್.ಲಾಡ್ಸ್ ಶ್ಲಾಘಿಸಿದರು.
ಟೀಂ ಇಂಡಿಯಾದ ಈ ಗೆಲುವನ್ನು ಕೇವಲ ಭಾರತೀಯ ಅಭಿಮಾನಿಗಳು ಸಂಭ್ರಮಿಸುತ್ತಿಲ್ಲ. ವಿಶ್ವವೇ ಸಂಭ್ರಮಿಸುತ್ತಿದೆ. ಅನುಭವಿಗಳ ಕೊರತೆ ಇದ್ದರೂ ಯುವಕರು ತೋರಿದ ಉತ್ತಮ ಪ್ರದರ್ಶನ, ತಂಡದ ನಿರ್ವಹಣೆ ಮತ್ತು ಆಸೀಸ್ ನೆಲದಲ್ಲಿ ಆಟಗಾರರರು ತೋರಿದ ಮನೋಭಾವನೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್ ಸಂತಸ ವ್ಯಕ್ತಪಡಿಸಿದರು.
ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದು ತವರಿಗೆ ಬಂದಿದ್ದರು. ಅನುಭವಿ ಆಟಗಾರರಾದ ಹನುಮ ವಿಹಾರಿ, ಕೆ.ಎಲ್.ರಾಹುಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಎಲ್ಲರೂ ಗಾಯಗೊಂಡಿದ್ದರು. ಸಮರ್ಪಕ ಬೌಲಿಂಗ್ ದಾಳಿಯ ಕೊರತೆ ಕಂಡು ಬಂತು. ಹೀಗಾಗಿ, ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಆಸ್ಟ್ರೇಲಿಯಾ ಮಾಜಿ ಆಟಗಾರರು ಭಾರತಕ್ಕೆ ಸೋಲು ಖಚಿತ ಎಂದೇ ಭಾವಿಸಿ ಹೇಳಿಕೆ ಕೊಟ್ಟಿದ್ದರು ಎಂದರು.