ಮುಂಬೈ:ವಿಶ್ವಕಪ್ಗೆ ಘೋಷಿಸಿರುವ ಭಾರತ ತಂಡದಲ್ಲಿ ಒಬ್ಬ ವೇಗಿಯ ಕೊರೆತೆ ಕಾಣುತ್ತಿದೆ ಎಂದು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ಬೌಲಿಂಗ್ ಮಾಡದಿರುವುದರ ಬಗ್ಗೆಯೂ ಸ್ವಲ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮುಗಿಯುತ್ತಿದ್ದಂತೆ ಯುಎಇ ಮತ್ತು ಓಮನ್ನಲ್ಲಿ ಟಿ-20 ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲು ಅರ್ಹತಾ ಪಂದ್ಯಗಳು ಓಮನ್ನಲ್ಲಿ ನಡೆಯಲಿವೆ. ಶಾರ್ಜಾ ಸ್ಪಿನ್ನರ್ಗೆ ನೆರವಾದರೆ, ಅಬುಧಾಬಿ ಮತ್ತು ದುಬೈ ವೇಗಿಗಳಿಗೆ ನೆರವಾಗುತ್ತದೆ. ಈ ಕಾರಣದಿಂದ ಪ್ರಸ್ತುತ ಭಾರತ ತಂಡ ಒಬ್ಬ ವೇಗಿಯ ಕೊರತೆಯನ್ನು ಹೊಂದಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಇದೊಂದು ಯೋಗ್ಯವಾದ ತಂಡವಾಗಿದೆ, ಆದರೆ ತಂಡದಲ್ಲಿ ಒಬ್ಬ ವೇಗದ ಬೌಲರ್ನ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ದುಬೈ ಮತ್ತು ಅಬುಧಾಬಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತೇವೆ. ಆದ್ದರಿಂದ ಇನ್ನೊಬ್ಬ ವೇಗದ ಬೌಲರ್ ಇದ್ದರೆ ಸೂಕ್ತವಾಗಿರುತ್ತಿತ್ತು ಎಂದು ಪ್ರಸಾದ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪ್ರಸಾದ್ ತಿಳಿಸಿದ್ದಾರೆ.