ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ ಕಳಪೆ ಸಾಧನೆಯೊಂದಕ್ಕೆ ಗುರಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಟೆಸ್ಟ್ನಲ್ಲಿ ಇದೇ ಮೊದಲ ಸಲ ಇಂತಹದ್ದೊಂದು ರೆಕಾರ್ಡ್ ಮೂಡಿ ಬಂದಿದೆ.
ಟೆಸ್ಟ್ ಚಾಂಪಿಯನ್ಶಿಪ್ನ ಎರಡು ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಯಾವುದೇ ಪ್ಲೇಯರ್ಸ್ ಅರ್ಧಶತಕ ಸಿಡಿಸಿಲ್ಲ. ಹೀಗಾಗಿ 2018ರ ಇದೇ ಮೊದಲ ಸಲ ಇಂತಹ ಕಳಪೆ ಸಾಧನೆಗೆ ಟೀಂ ಇಂಡಿಯಾ ಗುರಿಯಾಗಿದೆ. ಈ ಹಿಂದೆ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂತಹ ಪ್ರದರ್ಶನಕ್ಕೆ ಟೀಂ ಇಂಡಿಯಾ ಗುರಿಯಾಗಿತ್ತು.