ಕರ್ನಾಟಕ

karnataka

ETV Bharat / sports

ಲಂಕಾದ ಮತ್ತೋರ್ವ ಸಿಬ್ಬಂದಿಗೆ ಕೊರೊನಾ: ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ 'ಬಿ' ತಂಡ ಕಣಕ್ಕೆ

ಇಂಗ್ಲೆಂಡ್​ನಿಂದ ವಾಪಸ್​​ ಆಗಿರುವ ಲಂಕಾ ಕ್ರಿಕೆಟ್​ ಪ್ಲೇಯರ್ಸ್​ ಇದೀಗ ಕ್ವಾರಂಟೈನ್​​ಗೆ ಒಳಗಾಗಬೇಕಾಗಿರುವ ಕಾರಣ, ಅಲ್ಲಿನ ಬಿ ತಂಡ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

Sri Lanka team
Sri Lanka team

By

Published : Jul 9, 2021, 7:46 PM IST

ಕೊಲಂಬೊ:ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾದ ಕೆಲ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಇದೀಗ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್​ ಸರಣಿ ಮೇಲೆ ಇನ್ನಿಲ್ಲದ ಪರಿಣಾಮ ಬೀರಿದೆ. ಟೂರ್ನಿ ಆರಂಭಗೊಳ್ಳಲು ಕೇವಲ ಮೂರು ದಿನಗಳ ಕಾಲ ಬಾಕಿ ಉಳಿದಿರುವ ಕಾರಣ ಮತ್ತೊಂದು ತಂಡ ಕಣಕ್ಕಿಳಿಸಲು ಲಂಕಾ ಬೋರ್ಡ್​ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಶ್ರೀಲಂಕಾ ತಂಡದ ಬ್ಯಾಟಿಂಗ್​ ಕೋಚ್​ ಗ್ರಾಂಟ್​ ಫ್ಲವರ್ ಈಗಾಗಲೇ ಕೊರೊನಾ ಸೋಂಕಿಗೊಳಗಾಗಿದ್ದು, ಇದೀಗ ತಂಡದ ವಿಶ್ಲೇಷಕ ಶ್ರೀನಾಥ್​ ನಿರೋಶನ್​ಗೂ ಸೋಂಕು ದೃಢಗೊಂಡಿದೆ. ಇವರು ಲಂಕಾ ತಂಡದೊಂದಿಗೆ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದರಿಂದ ಇದೀಗ ಎಲ್ಲ ಪ್ಲೇಯರ್ಸ್​​ ಹಾಗೂ ಸಿಬ್ಬಂದಿ ಕ್ವಾರಂಟೈನ್​ಗೆ ಒಳಗಾಗಬೇಕಾಗಿದೆ.

ಶ್ರೀಲಂಕಾ ಕ್ರಿಕೆಟ್ ತಂಡ

ಇದನ್ನೂ ಓದಿರಿ: ನೆಲಕಚ್ಚಿದ ಶ್ರೀಲಂಕಾ ಕ್ರಿಕೆಟ್‌ ತಂಡ: ಸಂಭಾವನೆ ಪಡೆಯದೆ ತಂಡ ಕಟ್ಟಲು ಪಣತೊಟ್ಟ ಜಯವರ್ಧನೆ

ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ಲಂಕಾದ ಎಲ್ಲ ಪ್ಲೇಯರ್ಸ್​ ಇದೀಗ ಕ್ವಾರಂಟೈನ್​​ಗೆ ಒಳಗಾಗಬೇಕಾಗಿರುವ ಕಾರಣ ಜುಲೈ 13ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಸಿಂಹಳೀಯರ ಬೇರೆ ತಂಡ ಕಣಕ್ಕಿಳಿಸಲು ಲಂಕಾ ಬೋರ್ಡ್​ ನಿರ್ಧಾರ ಕೈಗೊಂಡಿದೆ. ಶ್ರೀಲಂಕಾ ಬಿ ತಂಡ ಈಗಾಗಲೇ ಬಯೋ ಬಬಲ್​ನಲ್ಲಿದ್ದು, ಯಾವುದೇ ಆಟಗಾರ ಇಂಗ್ಲೆಂಡ್​ಗೆ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಇದೇ ತಂಡವನ್ನು ಮೈದಾನಕ್ಕಿಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಮೈಕ್ರೋಸಾಫ್ಟ್‌ ಉದ್ಯೋಗಿಗಳಿಗೆ ಬಂಪರ್: ಪ್ರತಿ ಉದ್ಯೋಗಿಯ ಖಾತೆ ಸೇರಿದ ಬೋನಸ್ ಎಷ್ಟು ಗೊತ್ತೇ?

ಟೀಂ ಇಂಡಿಯಾದ ಪ್ರಮುಖ ಪ್ಲೇಯರ್ಸ್​​ಗಳಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಜಸ್ಪ್ರೀತ್​ ಬುಮ್ರಾ, ಜಡೇಜಾ ಸೇರಿದಂತೆ ಪ್ರಮುಖ ಆಟಗಾರರು ಸದ್ಯ ಇಂಗ್ಲೆಂಡ್​ನಲ್ಲಿದ್ದು, ಇದರ ಮಧ್ಯೆ ಅನುಭವಿ ಹಾಗೂ ಅನನುಭವಿ ಪ್ಲೇಯರ್ಸ್​ಗಳಿಂದ ಕೂಡಿದ್ದ ತಂಡ ಲಂಕಾ ಪ್ರವಾಸದಲ್ಲಿದೆ. ಕ್ಯಾಪ್ಟನ್​ ಶಿಖರ್ ಧವನ್​, ಬೌಲರ್​ ಭುವನೇಶ್ವರ್​ ಕುಮಾರ್​​, ಮನೀಷ್ ಪಾಂಡೆ, ಹಾರ್ದಿಕ್​ ಪಾಂಡ್ಯಾ ಜೊತೆಗೆ ಪೃಥ್ವಿ ಶಾ, ದೇವದತ್​ ಪಡಿಕ್ಕಲ್​ ಸೇರಿದಂತೆ ಅನೇಕ ಪ್ಲೇಯರ್ಸ್​ ಇದ್ದಾರೆ.

ABOUT THE AUTHOR

...view details