ಕರ್ನಾಟಕ

karnataka

ETV Bharat / sports

ಭಾರತ ತಂಡದ ನಾಯಕತ್ವ ದೊಡ್ಡ ಗೌರವ, ಅವಕಾಶ ಸಿಕ್ಕರೆ ಹಿಂಜರಿಯಲ್ಲ: ಬುಮ್ರಾ - ವಿರಾಟ್​ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿದ್ದ ವೇಳೆ, ಬುಮ್ರಾ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮುಂಬರುವ ಏಕದಿನ ಸರಣಿಯಲ್ಲೂ ರಾಹುಲ್​ ಜೊತೆಗೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

Jasprit Bumrah on captainship
ಜಸ್​ಪ್ರೀತ್ ಬುಮ್ರಾ ಭಾರತ ತಂಡದ ನಾಯಕತ್ವ

By

Published : Jan 17, 2022, 7:35 PM IST

ಪಾರ್ಲ್ (ದಕ್ಷಿಣ ಆಫ್ರಿಕಾ):ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶವೊಂದು ನನ್ನ ಪಾಲಿಗೆ ಬಂದರೆ ನಾನು ಹಿಂಜರಿಯುವುದಿಲ್ಲ ಎಂದು ಭಾರತ ತಂಡದ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಸೋಮವಾರ ತಿಳಿಸಿದ್ದಾರೆ.

ಟೆಸ್ಟ್​ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದಂತೆ ವಿರಾಟ್ ಕೊಹ್ಲಿ ಅವರ ಎಲ್ಲಾ ಸ್ವರೂಪಗಳ ನಾಯಕತ್ವದ ಅವಧಿ ಅಂತ್ಯಗೊಂಡಿದೆ. ಇದೀಗ ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾ ರೇಸ್​ನಲ್ಲಿ ಮೊದಲಿಗರಾಗಿ ಇದ್ದಾರಾದರೂ ಈಗಾಗಲೇ ಅವರಿಗೆ 34 ವರ್ಷಗಳಾಗಿದ್ದು ದೀರ್ಘಕಾಲಿನ ನಾಯಕನ ಸ್ಥಾನಕ್ಕೆ ಬೇರೆ ಆಟಗಾರನ ಹುಡುಕಾಟದಲ್ಲಿ ಬಿಸಿಸಿಐ ಇದೆ.

ಈ ರೇಸ್​ನಲ್ಲಿ ರೋಹಿತ್ ಶರ್ಮಾ ಅಲ್ಲದೆ, ಕೆಲವು ಕ್ರಿಕೆಟ್ ದಿಗ್ಗಜರು ಕರ್ನಾಟಕ ಬ್ಯಾಟರ್ ಕೆ.ಎಲ್.ರಾಹುಲ್, ವಿಕೆಟ್ ಕೀಪರ್​ ಬ್ಯಾಟರ್​ ರಿಷಭ್ ಪಂತ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾರ ಹೆಸರನ್ನು ಸೂಚಿಸುತ್ತಿದ್ದಾರೆ.

"ಒಂದು ವೇಳೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕರೆ, ಅದು ನನಗೆ ದೊಡ್ಡ ಗೌರವವಾಗಲಿದೆ. ಯಾವುದೇ ಆಟಗಾರ ಇಂತಹ ಅವಕಾಶ ತಿರಸ್ಕರಿಸುತ್ತಾರೆ ಎಂದು ನನಗನ್ನಿಸುವುದಿಲ್ಲ ಮತ್ತು ನಾನು ಕೂಡ ಈ ವಿಚಾರದಲ್ಲಿ ವಿಭಿನ್ನನಲ್ಲ. ಯಾವುದೇ ನಾಯಕತ್ವದ ಗುಂಪಾಗಿರಲಿ, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಕೊಡುಗೆ ನೀಡುವುದಕ್ಕೆ ಯಾವಾಗಲೂ ಬಯಸುತ್ತೇನೆ" ಎಂದು ಜಸ್ಪ್ರೀತ್ ಬುಮ್ರಾ ಪಿಟಿಐಗೆ ತಿಳಿಸಿದ್ದಾರೆ.

ನಾನು ಪರಿಸ್ಥಿತಿಯನ್ನು ಆಟಗಾರನ ದೃಷ್ಟಿಕೋನದಿಂದಲೇ ನೋಡುತ್ತೇನೆ. ಜವಾಬ್ದಾರಿಯನ್ನು ವಹಿಸಿಕೊಳ್ಳುವುದು, ಆಟಗಾರರೊಂದಿಗೆ ಮಾತನಾಡುವುದು ಮತ್ತು ಅವರಿಗೆ ಸಹಾಯ ಮಾಡುವುದು ನನ್ನ ವಿಧಾನವಾಗಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದೆ ಹೋಗುತ್ತೇನೆ ಎಂದು ಬುಮ್ರಾ ತಾವೂ ಕೂಡ ನಾಯಕತ್ವವನ್ನು ನಿರ್ವಹಿಸಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿದ್ದ ವೇಳೆ, ಬುಮ್ರಾ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮುಂಬರುವ ಏಕದಿನ ಸರಣಿಯಲ್ಲೂ ರಾಹುಲ್​ ಜೊತೆಗೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ನಾಯಕತ್ವ ತ್ಯಜಿಸುವ ವೇಳೆ ಬಿಸಿಸಿಐ ನೀಡಿದ ಈ ಆಫರ್ ತಿರಸ್ಕರಿಸಿದ್ರು ಕೊಹ್ಲಿ!

ABOUT THE AUTHOR

...view details