ಲಂಡನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಕ್ರಮೇಣ ಆಸ್ಟ್ರೇಲಿಯಾದತ್ತ ವಾಲುತ್ತಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಭಾರತದ ಬೌಲರ್ಗಳು ಆಕ್ರಮಣಕಾರಿ ದಾಳಿ ನಡೆಸಿ ಆಸ್ಟ್ರೇಲಿಯಾದ 7 ವಿಕೆಟ್ ಉರುಳಿಸಿ ಕೇವಲ 108 ರನ್ ಮಾತ್ರ ಬಿಟ್ಟುಕೊಟ್ಟರು.
ಎರಡನೇ ದಿನ ಪಂದ್ಯ ಆರಂಭವಾಗಿ ಆಸಿಸ್ 361 ರನ್ ಗಳಿಸುತ್ತಿದ್ದಂತೆ ಭಾರತ ನಾಲ್ಕನೇ ವಿಕೆಟ್ ಪಡೆದುಕೊಂಡಿತು. ಇದಾದ ಬಳಿಕ ಆಸ್ಟ್ರೇಲಿಯಾ ತಂಡ 469ಕ್ಕೆ ಆಲೌಟ್ ಆಯಿತು. ಆದರೆ ಮೊದಲ ಇನ್ನಿಂಗ್ಸ್ ಆರಂಭಮಾಡಿದ ಟೀಂ ಇಂಡಿಯಾದ ಮೊದಲಿಗೇ 4 ಅನುಭವಿ ಬ್ಯಾಟರ್ಗಳನ್ನು ಕಳೆದುಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 5 ವಿಕೆಟ್ ನಷ್ಟ ಅನುಭವಿಸಿ151 ರನ್ ಗಳಿಸಲಷ್ಟೇ ಶಕ್ತವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ, ಭರತ ಆರಂಭಿಕರು ರನ್ಗಳಿಸುವಲ್ಲಿ ವೈಫಲ್ಯವನ್ನು ಎದುರಿಸಿದರು. ಭರವಸೆಯ ಯುವ ಬ್ಯಾಟರ್ ಶುಭಮನ್ ಗಿಲ್ 13 ರನ್ ವಿಕೆಟ್ ಕೊಟ್ಟರೆ, ನಾಯಕ ರೋಹಿತ್ ಶರ್ಮಾ 15 ರನ್ಗೆ ಪೆವಿಲಿಯನ್ ದಾರಿ ಹಿಡಿದರು. ನಂತರ ವಿದೇಶಿ ಪಿಚ್ಗಳಲ್ಲಿ ಉತ್ತಮ ರನ್ ಗಳಿಸಿ ಬ್ಯಾಟರ್ಗಳಾದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಸಹ ಬೃಹತ್ ರನ್ ಕಲೆಹಾಕಲಿಲ್ಲ. ಭಾರತ 71 ರನ್ಗೆ ತನ್ನ ನಾಲ್ಕನೇ ವಿಕೆಟ್ ಅನ್ನು ಕಳೆದುಕೊಂಡಿತ್ತು.
ಇದಾದ ಬಳಿಕ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಸ್ವಲ್ಪ ಮಟ್ಟಿಗೆ ಹೋರಾಟ ಮುಂದುವರಿಸಿದರಾದರೂ ಅವರೂ ಸ್ಪಿನ್ ಬೌಲರ್ಗೆ ಬಲಿಯಾದರು. ಆದರೆ, ಇದುವರೆಗಿನ ಈ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾದರು. ಜಡೇಜಾ 51 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಆದರೆ ಅವರ ಚುಟುಕು ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು ಏಕೈಕ ಸಿಕ್ಸರ್ ದಾಖಲಿಸಿದರು.
ಭರತ್ ಮತ್ತು ರಹಾನೆ ಮೇಲೆ ಭರವಸೆ: ಇದೀಗ ಮೂರನೇ ದಿನದಲ್ಲಿ ಭಾರತದ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಅವರು ಭಾರತದ ಫಾಲೋ-ಆನ್ ಉಳಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಮೂರನೇ ದಿನದ ಮೊದಲ ಸೆಷನ್‌ನ ಆಟವು ಭಾರತವು ಈ ಪರೀಕ್ಷೆಯನ್ನು ಉಳಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.