ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನೆದರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 160 ರನ್ಗಳ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದ ನಂತರ ಟೀಂ ಇಂಡಿಯಾ ನವೆಂಬರ್ 15 ರಂದು ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಬೇಕಿದ್ದು, ಅದಕ್ಕೂ ಮೊದಲು ಮೊಹಮ್ಮದ್ ಸಿರಾಜ್ ಗಾಯಗೊಂಡಿರುವುದು ತಂಡಕ್ಕೆ ಕೊಂಚ ಪೆಟ್ಟು ಬಿದ್ದಂತಾಗಿದೆ. ಇನ್ನು ತಂಡದ ಪ್ರದರ್ಶನದ ಬಗ್ಗೆ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿರಾಜ್ ಬಗ್ಗೆ ಹೇಳಿದ್ದು ಹೀಗೆ:ಸಿರಾಜ್ ಗಾಯಗೊಂಡಿರುವುದರ ಬಗ್ಗೆ ಮಾತನಾಡಿದ ಫೀಲ್ಡಿಂಗ್ ಕೋಚ್,ಇದು ಯಾವುದೂ ಸಮಸ್ಯೆಯಲ್ಲ. ನಾನು ಬೌಲರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಫೀಲ್ಡಿಂಗ್ ಸಮಯದಲ್ಲಿ ಅವರ ಬದ್ಧತೆ ಅತ್ಯುತ್ತಮವಾಗಿದೆ. ಅವರು ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವ ರೀತಿ ಅತ್ಯುತ್ತಮವಾಗಿದೆ. ಅವರು ಪ್ರಮುಖ ಪಂದ್ಯಗಳಲ್ಲಿ ಪುಟಿದೇಳುವ ಕೌಶಲ್ಯವನ್ನು ಹೊಂದಿದ್ದಾರೆ ಎಂದು ದಿಲೀಪ್ ಬೆಂಗಳೂರಿನಲ್ಲಿ ನಡೆದ ಪಂದ್ಯದ ನಂತರದ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು.
ನಾವು ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ತಂಡವಾಗಿ ಮುನ್ನಡೆಯುತ್ತಿದ್ದೇವೆ. ನಮ್ಮ ಗುಣಮಟ್ಟಕ್ಕೆ ತಕ್ಕಂತೆ ಆಡುತ್ತಿದ್ದೇವೆ. ಧರ್ಮಶಾಲಾದಲ್ಲಿ ನಾವು ಅವರ ವಿರುದ್ಧ ಉತ್ತಮವಾಗಿ ಆಡಿದ್ದೇವೆ ಎಂದರು.
ಚಿನ್ನದ ಪದಕದ ಬಗ್ಗೆ ಮಾತನಾಡಿದ ದಿಲೀಪ್:ಫೀಲ್ಡಿಂಗ್ ಕೋಚ್ ಚಿನ್ನದ ಪದಕ ಸಮಾರಂಭವನ್ನು ಪ್ರಾರಂಭಿಸುವ ಹಿಂದಿನ ಪ್ರಮುಖ ಕಾರಣವನ್ನೂ ನೀಡಿದ್ದಾರೆ. ಈ ಸಂಪೂರ್ಣ ಆಲೋಚನೆ ಈಗಲೇ ಪ್ರಾರಂಭವಾಗಿಲ್ಲ. ಈಗ ನೀವು ವಿಶ್ವಕಪ್‌ನಲ್ಲಿ ಈ ಪದಕಗಳನ್ನು ನೋಡುತ್ತಿದ್ದೀರಿ. ನಾವು ನಾಲ್ಕು ತಿಂಗಳ ಹಿಂದೆ ಇದನ್ನು ಪ್ರಾರಂಭಿಸಿದ್ದೇವೆ. ಅಲ್ಲಿ ನಾವು ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ವೆಸ್ಟ್ ಫೀಲ್ಡರ್ ಅನ್ನು ಘೋಷಿಸುತ್ತಿದ್ದೆವು. ಇದೀಗ ನಾವು ವಿಶ್ವಕಪ್‌ನಲ್ಲಿ ಮುಂದುವರಿಸಿದ್ದು, ಈ ಪದಕ ಪ್ರದಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ದಿಲೀಪ್ ಹೇಳಿದರು.