ಪುಣೆ, ಮಹಾರಾಷ್ಟ್ರ: ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸುವ ಮೂಲಕ ಗೆಲುವಿನ ದಡ ತಲುಪಿದರು. ಭಾರತದ ಮಾಜಿ ನಾಯಕ 97 ಎಸೆತಗಳಲ್ಲಿ 103 ರನ್ ಗಳಿಸಿ ಮಿಂಚಿದರು. ಆದರೆ, ವಿರಾಟ್ ಕೊಹ್ಲಿ ಶತಕದ ಆಸೆಗಾಗಿ ಆಡುತ್ತಿರಲಿಲ್ಲ. ವಾಸ್ತವವಾಗಿ ವಿರಾಟ್ ಕೊಹ್ಲಿ ಸಿಂಗಲ್ ರನ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ವಿರಾಟ್ ಕೊಹ್ಲಿಯನ್ನು ಹಾಗೆ ಮಾಡದಂತೆ ಕೆಎಲ್ ರಾಹುಲ್ ತಡೆದರು.
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅಕ್ಟೋಬರ್ 19ರ ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 8 ವಿಕೆಟ್‌ಗೆ 256 ರನ್ ಗಳಿಸಿತು. ಗೆಲುವಿನ ಗುರಿಯನ್ನು ಭಾರತ 41.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು. ಕೊಹ್ಲಿ ಸಿಕ್ಸರ್ ಬಾರಿಸುವ ಶತಕ ಪೂರೈಸಿ, ಭಾರತವನ್ನು ಗೆಲುವಿನ ದಡ ಸೇರಿಸಿದರು.
ಸಿಂಗಲ್ ತೆಗೆದುಕೊಳ್ಳುವುದು ಬೇಡವೆಂದು ನಾನು ವಿರಾಟ್ ಕೊಹ್ಲಿಗೆ ಹೇಳಿದೆ. ಆದರೆ ವಿರಾಟ್ ಕೊಹ್ಲಿ ಅವರು ಸಿಂಗಲ್ ತೆಗೆದುಕೊಳ್ಳದಿದ್ದರೆ ಜನರು ನನ್ನನ್ನು ಕೆಟ್ಟದ್ದಾಗಿ ನೋಡುತ್ತಾರೆ. ಈ ರೀತಿ ಮಾಡುವ ಮೂಲಕ ನಾನು ನನ್ನ ವೈಯಕ್ತಿಕ ದಾಖಲೆಗಾಗಿ ಆಡುತ್ತಿದ್ದೇನೆ ಎಂದು ಜನರು ಹೇಳಿಕೊಳ್ಳುತ್ತಾರೆ ಎಂದು ಕೊಹ್ಲಿ ಹೇಳಿದ್ದರು. ಆದರೆ ವಿರಾಟ್ನನ್ನು ಸಮಾಧಾನ ಪಡಿಸಿದ್ದ ಕೆಎಲ್ ರಾಹುಲ್, ನಾವು ಸುಲಭವಾಗಿ ಪಂದ್ಯ ಗೆಲ್ಲುತ್ತೇವೆ. ನೀವೂ ಶತಕ ಪೂರೈಸಬೇಕು ಎಂದು ಹೇಳಿದಾಗ ವಿರಾಟ್ ಕೊಹ್ಲಿ ನನ್ನ ಮಾತುಗಳನ್ನು ಒಪ್ಪಿಕೊಂಡರು. ಇದಾದ ಬಳಿಕ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು ಎಂದು ಕೆಎಲ್ ರಾಹುಲ್ ಹೇಳಿದರು.
ಭಾರತ ತಂಡವು ಸತತ ನಾಲ್ಕು ಗೆಲುವಿನ ಮೂಲಕ ವಿಶ್ವಕಪ್ ಪಾಯಿಂಟ್ ಟೇಬಲ್ನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಭಾರತ ಮತ್ತು ನ್ಯೂಜಿಲೆಂಡ್ 8 - 8 ಅಂಕಗಳನ್ನು ಹೊಂದಿವೆ. ಆದರೆ, ಕಿವೀಸ್ ತಂಡದ ರನ್ ರೇಟ್ ಭಾರತಕ್ಕಿಂತ ಉತ್ತಮವಾಗಿದೆ. ಇದೀಗ ಭಾರತ ತಂಡ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ಸೋಲಿಲ್ಲದ ಸರದಾರರಂತೆ ಮುನ್ನುಗ್ಗುತ್ತಿರುವ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಮೊದಲ ಸೋಲಿನ ರುಚಿ ಸಿಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಇದಾದ ನಂತರ ಭಾರತ ತಂಡ ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ.
ಓದಿ:ವಿಶ್ವಕಪ್: ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ ಕೊಹ್ಲಿ; 'ವಿರಾಟ್' ಪ್ರದರ್ಶನಕ್ಕೆ ಮಣಿದ ಬಾಂಗ್ಲಾ!